ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ.
ಈ ಮೂಲಕ ರಾಜರ್ಷಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಇದೇ ಮೊದಲ ಬಾರಿಗೆ ಸಂಸದರಾಗಿದ್ದಾರೆ.
ರಾಜ್ಯಸಭೆಗೆ 12 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ರಾಷ್ಟçಪತಿಗಿದೆ. ಕೇಂದ್ರ ಸರ್ಕಾರ ಅಂತಹ ಸದಸ್ಯರ ಹೆಸರನ್ನು ಶಿಫಾರಸ್ಸು ಮಾಡಬೇಕಾಗುತ್ತದೆ.
Shri V. Vijayendra Prasad Garu is associated with the creative world for decades. His works showcase India's glorious culture and have made a mark globally. Congratulations to him for being nominated to the Rajya Sabha.
— Narendra Modi (@narendramodi) July 6, 2022
ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಅಧಿಕಾರ ಇರುವುದಿಲ್ಲ. ಅವರು ಯಾವುದೇ ಪಕ್ಷದೊಂದಿಗೆ ಸಂಬAಧ ಹೊಂದಿರಲ್ಲ.
ಸಂಗೀತ ಮಾಂತ್ರಿಕ ಇಳಯರಾಜ, ಅಥ್ಲೀಟ್ ಪಿ ಟಿ ಉಷಾ, ಕೆ ವಿ ವಿಜಯೇಂದ್ರ ಪ್ರಸಾದ್ ಅವರನ್ನೂ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ಆಪರೇಷನ್ ದಕ್ಷಿಣದ ರಣತಂತ್ರದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದಕ್ಷಿಣ ಭಾರತದ ನಾಲ್ವರನ್ನೇ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ.