ಬಿಗ್ ಬಾಸ್ ಕನ್ನಡ 10 ನಲ್ಲಿ ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ಇಲ್ಲೊಬ್ಬ ಅಭಿಮಾನಿ ತನ್ನ ಅರ್ಧ ಗಡ್ಡ ಹಾಗೂ ಮೀಸೆಯನ್ನು ಬೋಳಿಸಿಕೊಂಡಿದ್ದಾನೆ.
ವಿನಯ್ ಗೌಡ , ಸಂಗೀತಾ ಶೃಂಗೇರಿ ಅವರಂಥ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿದ ಡ್ರೋನ್ ಪ್ರತಾಪ್ ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಡ್ರೋನ್ ಪ್ರತಾಪ್ ವಿನ್ ಆಗುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಭಾಗಿಸಿದ್ದರು. ಆದರೆ, ರನ್ನರ್ ಅಪ್ ಆಗಿದ್ದು, ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನಿಯೊಬ್ಬ, ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ತನ್ನ ಅರ್ಧ ಮೀಸೆ ಹಾಗೂ ಗಡ್ಡವನ್ನು ಬೋಳಿಸಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಝೈನುಲ್ ಆಬಿದ್ ಡ್ರೋನ್ ಪ್ರತಾಪ್ ಅಭಿಮಾನಿಯಾಗಿದ್ದಾನೆ. ಬಿಗ್ ಬಾಸ್ ಸೀಸನ್ 10 ರಲ್ಲಿ ಪ್ರತಾಪ್ ವಿನ್ನರ್ ಆಗುತ್ತಾರೆ ಎಂದು ಹೇಳಿಕೊಂಡಿದ್ದ. ಒಂದು ವೇಳೆ ಸೋತರೆ ಅರ್ಧ ಮೀಸೆ, ಗಡ್ಡ ತೆಗೆಯುವುದಾಗಿ ಹಾಗೂ ಜೊತೆಗೆ ಹಸಿಮೆಣಸಿನಕಾಯಿ ತಿನ್ನುವುದಾಗಿ ಚಾಲೆಂಜ್ ಹಾಕಿದ್ದ. ಇದೀಗ ಪ್ರತಾಪ್ ರನ್ನರ್ ಅಪ್ ಆಗಿದ್ದರಿಂದ ಅಭಿಮಾನಿ ಝೈನುಲ್ ಆಬಿದ್ ನುಡಿದಂತೆ ನಡೆದುಕೊಂಡಿದ್ದು, ತನ್ನ ಅರ್ಧ ಗಡ್ಡ, ಮೀಸೆ ಬೋಳಿಸಿ ಹಸಿಮೆಣಸಿನಕಾಯಿ ತಿಂದಿದ್ದಾನೆ.