`ಕೆಟ್ಟ ಹೆಸರು ತೆಗೆದುಕೊಂಡಿರುವ ಸಚಿವರನ್ನು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರನ್ನು ಬದಲಿಸುವಂತೆ’ ಸಿಎಂ ಬಸವರಾಜ ಬೊಮ್ಮಾಯಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಗ್ರಹಿಸಿದ್ದಾರೆ. ಜೊತೆಗೆ ನಿಗಮ ಮಂಡಳಿಗಳ ನೇಮಕಾತಿ ಯಾಕೆ ವಿಳಂಬ ಆಗ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
`ಇವತ್ತು ಒಂದಷ್ಟು ಜನ ಬಂದು ಭೇಟಿ ಆದ್ರು, ಕಾರ್ಯಕರ್ತರಲ್ಲಿ ನೋವಿದೆ. ನಿಗಮ ಮಂಡಳಿಗಳ ನೇಮಕಾತಿ ಬಹಳ ದಿವಸದಿಂದ ಪೆಂಡಿAಗ್ ಇದೆ ಅಂತ. ಇದರ ಬಗ್ಗೆ ಮುಖ್ಯನಮಂತ್ರಿ ಜೊತೆಯಲ್ಲೂ ಮಾತಾಡಿದ್ದೀನಿ, ರಾಜ್ಯ ಅಧ್ಯಕ್ಷರ ಜೊತೆಯಲ್ಲೂ ಮಾತಾಡಿದ್ದೀನಿ. ಶೀಘ್ರವಾಗಿ ನಿಗಮ ಮಂಡಳಿಗಳ ನೇಮಕಾತಿ ಮಾಡ್ಬೇಕು.
ಕೆಲವರು ಪರಿಸ್ಥಿತಿಯ ಲಾಭ ಪಡೆದು ಎಂಜಾಯ್ ಮಾಡ್ತಿದ್ದಾರೆ. ಪಕ್ಷಕ್ಕೆ ಕೊಡುಗೆ ಏನು..? ಪಕ್ಷಕ್ಕೆ ಕೊಡುಗೆ ಮತ್ತು ಜನರಿಗೆ ಸೇವೆ ಯಾರದ್ದು ಇದ್ಯೋ ಅವರನ್ನು ಮುಂದುವರಿಸಬೇಕು. ಯಾರದ್ದು ಪಾರ್ಟಿಗೆ ಕೊಡುಗೆ ಇಲ್ಲ, ಜನರಿಗೆ ಸೇವೆ ಇಲ್ಲ ಅವರನ್ನು ನಿಗಮ ಮಂಡಳಿಯಲ್ಲಿ ಇರಿಸಿಕೊಳ್ಳುವುದರಲ್ಲಿ ಅರ್ಥ ಇಲ್ಲ. ಅಂಥವರನ್ನು ನಿಗಮ ಮಂಡಳಿಗಳಿAದ ಕೈಬಿಡಬೇಕು ಅನ್ನೋದು ಬಹಳ ಹಿಂದೆನೇ ಕೋರ್ ಕಮಿಟಿಯಲ್ಲಿ ಚರ್ಚೆ ಆಗಿತ್ತು . ಆ ನಿರ್ಣಯವನ್ನು ಅನುಷ್ಠಾನಗೊಳಿಸುವ ಕೆಲಸ ಯಾಕೆ ನೆನೆಗುದಿಗೆ ಬಿದ್ದಿದೆ ಗೊತ್ತಿಲ್ಲ. ಆಗ್ಬೇಕು, ಕಾಯಕಲ್ಪ ಕೊಡ್ಬೇಕು, ಇನ್ನೊಂದು ವರ್ಷ ಇದೆ ಚುನಾವಣೆಗೆ ಹೋಗುವುದಕ್ಕೆ.
ಜನಪರವಾಗಿ ಪಕ್ಷಕ್ಕೆ ಶಕ್ತಿ ತುಂಬುವ ರೀತಿಯಲ್ಲಿ ಪ್ರಾಮಾಣಿಕವಾಗಿ ಯಾರು ಕೆಲಸ ಮಾಡ್ತಿದ್ದಾರೆ ಅದು ಸಚಿವರಿರಲಿ, ನಿಗಮ ಮಂಡಳಿಯ ಅಧ್ಯಕ್ಷರಿರಲಿ, ಅವ್ರು ಮುಂದುವರಿಯಬೇಕು,. ಯಾರ ಕೆಟ್ಟ ಹೆಸರು ತಗೊಂಡಿದ್ದಾರೆ ಅವನ್ನು ಮುಂದುವರಿಸಿದರೆ, ಅದರ ಪರಿಣಾಮ ಪಕ್ಷದ ಮೇಲು ಆಗುತ್ತೆ. ಹಾಗೆ ಆಗದಂತೆ ಎಚ್ಚರ ವಹಿಸಬೇಕು ಎನ್ನುವುದನ್ನು ಬಹಳ ಬಾರಿ ಚರ್ಚೆ ಮಾಡಿದ್ದೀವಿ’
ಎಂದು ಬಿಜೆಪಿ ಶಾಸಕ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಇತ್ತೀಚೆಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ವಿರುದ್ಧ ಬಿಜೆಪಿ ಶಾಸಕರಾದ ರೇಣುಕಾಚಾರ್ಯ ಮತ್ತು ಸೋಮಶೇಖರ್ ರೆಡ್ಡಿ ಬಹಿರಂಗ ಅಸಮಾಧಾನ ಹೊರಹಾಕಿದ್ದರು.