ಕುಡಿದ ಮತ್ತಿನಲ್ಲಿದ್ದ ರೈಲ್ವೇ ಸಂರಕ್ಷಣಾ ಪಡೆ (ಆರ್ಪಿಎಫ್) ಇನ್ಸ್ಪೆಕ್ಟರ್ ಮಂಡ್ಯ ರೈಲು ನಿಲ್ದಾಣದಲ್ಲಿ ವೃದ್ಧ ವ್ಯಾಪಾರಿಯೊಬ್ಬರನ್ನು ಫೆಬ್ರವರಿ 20 ರಂದು ಠಾಣೆಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ.
ವೃದ್ಧ ನಿಂಗಣ್ಣ ಹೆಬ್ಬೆರಳು ಮುರಿದಿದ್ದು, ದೇಹದ ಮೇಲೆ ಹಲವು ಗಾಯಗಳಾಗಿವೆ. ಸದ್ಯ ನಿಂಗಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ಪೊಲೀಸ್ ಇನ್ಸ್ಸ್ಪೆಕ್ಟರ್ ಅಬೂ ರಾಮಚಂದ್ರನ್ ರನ್ನು ಅಮಾನತು ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಜೂನಿಯರ್ ಪೊಲೀಸ್ನ್ನು ವರ್ಗಾವಣೆ ಮಾಡಲಾಗಿದೆ.
ಪ್ರಕರಣ ಮುಚ್ಚಿಹಾಕಲು ಯತ್ನ
ಪೊಲೀಸ್ ಅಧಿಕಾರಿ ಅಬೂ ರಾಮಚಂದ್ರನ್ ಅವರು ನಿಂಗಣ್ಣನ ಅಂಗಡಿಯ ಹತ್ತಿರ ಬಂದಾಗ, ನಿಂಗಣ್ಣ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿ ರಾಮಚಂದ್ರನ್ ನಿಂಗಣ್ಣರನ್ನು ಆರ್ಪಿಎಫ್ ಠಾಣೆಗೆ ಎಳೆದೊಯ್ದು ಥಳಿಸಿದ್ದಾರೆ. ಈ ವೇಳೆ ನಿಂಗಣ್ಣನ ಹೆಬ್ಬೆರಳು ಮುರಿದಿದೆ. ರಕ್ತಸ್ರಾವದ ಮಡುವಿನಲ್ಲಿ ನಿಂಗಣ್ಣ ಬಿದ್ದಿರುವಾಗ ಠಾನೆಯ ಪೊಲೀಸರೇ ನಿಂಗಣ್ಣರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ವೃದ್ಧ ನಿಂಗಣ್ಣ ಜಿಆರ್ಪಿ ಠಾಣೆಗೆ ಬಂದು ಅಬೂ ವಿರುದ್ಧ ದೂರು ನೀಡಲು ಬಯಸಿದಾಗ ಪೊಲೀಸರು ಆರ್ಪಿಎಫ್ಗೆ ಪೊಲೀಸ್ ಗೆ ಈ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಆರ್ಪಿಎಫ್ ಪೊಲೀಸರು ತಾವು ಹೇಳಿದಂತೆ ಮಾತ್ರ ಪ್ರಕರಣ ದಾಖಲಿಸಿದರೆ ರೈಲ್ವೇಸ್ಟೇಷನ್ನಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಲಾಗುತ್ತದೆ ಎಂದು ಬೆದರಿಸಿದ್ದಾರೆ. ಅಲ್ಲದೇ, ಚಿಕಿತ್ಸಾ ವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ಅಬೂ ನಿಂಗಣ್ಣನಿಗೆ ತಿಳಿಸಿದ್ದು, ಪ್ರಕರಣ ಮುಚ್ಚಿಹಾಕಲು ಮಧ್ಯವರ್ತಿ ಮೂಲಕ ನಿಂಗಣ್ಣನಿಗೆ 1.5 ಲಕ್ಷ ರೂ. ಕಳುಹಿಸಿದ್ದಾರೆ.
ನಿಂಗಣ್ಣನಿಗೆ ಚಿಕಿತ್ಸೆ ನೀಡಿದ ವೈದ್ಯರು ಸಣ್ಣ ಗಾಯಗಳಾಗಿವೆ ಎಂದು ರಿಪೋರ್ಟ್ನಲ್ಲಿ ಹೇಳಿದ್ದಾರೆ. ಆದರೆ, ನಿಂಗಣ್ಣ ಸ್ಥಿತಿ ಕಠೀಣವಾಘಿದ್ದು ಇನ್ನೂ 4 ತಿಂಗಳುಗಳ ಕಾಲ ಅವರು ಹಾಸಿಗೆಯಲ್ಲಿಯೇ ಕಾಲ ಕಳೆಯಬೇಕಾಗಿದೆ. ಆರ್ಪಿಎಫ್ನ ಇನ್ಸ್ಪೆಕ್ಟರ್ ಬೋರೋ ಅವರು ಅಬೂ ವಿರುದ್ಧ ವಿಚಾರಣೆ ನಡೆಸುತ್ತಿದ್ದು, ಎಎಸ್ಐ ಪರಮೇಶ್ ಅವರನ್ನು ಮಂಡ್ಯ ರೈಲ್ವೆ ನಿಲ್ದಾಣದಿಂದ ವರ್ಗಾವಣೆ ಮಾಡಲಾಗಿದೆ.
https://youtu.be/18-r6tjB764