ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ.
ಮಡಿಕೇರಿ ತಾಲ್ಲೂಕಿನ ಕರಿಕೆ, ಪೆರಾಜೆ, ಅರವತ್ತೊಕ್ಲು, ಕರ್ಣ0ಗೇರಿ, ಸುಳ್ಯ ತಾಲೂಕಿನ ಸಂಪಾಜೆ, ಕಲ್ಲುಗುಂಡಿ ಸೇರಿ ಹಲವು ಗ್ರಾಮಗಳಲ್ಲಿ ಭೂ ಕಂಪನವಾಗಿದೆ.
ಬೆಳಗ್ಗೆ 7 ಗಂಟೆ ಸುಮಾರಿಗೆ 4-5 ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಮನೆಯ ಪಾತ್ರೆ, ಇತರೆ ಸರಾಂಜಾಮು ಕೆಳಗೆ ಬಿದ್ದಿದೆ. ಕೆಲವೆಡೆ ಭೂಮಿ ಕೂಡ ಸಣ್ಣದಾಗಿ ಬಿರುಕು ಬಿಟ್ಟಿದೆ. ಈ ಬೆಳವಣಿಗೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕೇವಲ ಒಂದು ವಾರದ ಅಂತರದಲ್ಲಿ ಮೂರು ಭಾರಿ ಭೂಮಿ ಕಂಪಿಸಿದೆ. ಆದರೇ, ಭೂವಿಜ್ಞಾನಿಗಳು ಮಾತ್ರ ಆತಂಕ ಬೇಡ ಎನ್ನುತ್ತಿದ್ದಾರೆ.