* ಬೆಲ್ಲ (Jaggery)ತಿಂದರೇ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ
* ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ
* ಡಿಟಾಕ್ಸ್ನಂತೆ ಕೆಲಸ ಮಾಡಿ ಲಿವರ್ ಅನ್ನು ಸ್ವಚ್ಛಗೊಳಿಸುತ್ತದೆ (Liver function)
* ದೇಹತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ
* ಬೆಲ್ಲ ಶರೀರದ ಅನೇಕ ರೀತಿಯ ಎಂಜೈಮ್ಗಳನ್ನು ಆಸಿಟಿ ಆಮ್ಲವಾಗಿ ಬದಲಿಸುತ್ತವೆ.. ಈ ಮೂಲಕ ಜೀರ್ಣ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ
* ಬೆಲ್ಲ-ತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ತಿಂದರೇ ಮೈಗ್ರೇನ್ ತಲೆ ನೋವು (Migraine headache) ಕಡಿಮೆ ಆಗುತ್ತದೆ
* ಶರೀರದ ಯಾವುದೇ ಭಾಗದಲ್ಲಿ ತುಂಬಾ ನೋವು ಇದ್ದರೇ ತುಪ್ಪದಲ್ಲಿ ಹಾಕಿದ ಬೆಲ್ಲದ ತುಣುಕನ್ನು ನೋವಿರುವ ಕಡೆ ಇರಿಸಿ. ನೋವು ಕಡಿಮೆ ಆಗುತ್ತದೆ
* ಕೀಲು ನೋವಿನ ಉಪಶಮನಕ್ಕೂ ಬೆಲ್ಲ ಕೆಲಸ ಮಾಡುತ್ತದೆ. ಪ್ರತಿದಿನ ಶುಂಠಿ-ಬೆಲ್ಲವನ್ನು ಸಮಪ್ರಮಾಣದಲ್ಲಿ ಬೆರೆಸಿ ತೆಗೆದುಕೊಂಡರೇ ನೋವು ಕಡಿಮೆ ಆಗುತ್ತದೆ
* ಒಣಶುಂಠಿಯನ್ನು ಪುಡಿಮಾಡಿ.. ಅದರಲ್ಲಿ ಸ್ವಲ್ಪ ಬೆಲ್ಲ ಬೆರೆಸಿ ಆ ಮಿಶ್ರಣವನ್ನು ಉಗುರುಬೆಚ್ಚಗಿನ ನೀರಿನಲ್ಲಿ ಮಿಕ್ಸ್ ಮಾಡಿ ತೆಗೆದುಕೊಂಡರೇ ಬಿಕ್ಕಳಿಕೆ ನಿಲ್ಲುತ್ತದೆ
* ಬೆಲ್ಲದಲ್ಲಿರುವ ಮೆಗ್ನಿಷಿಯಂನಿಂದ (Magnesium) ರಕ್ತನಾಳಗಳು, ನಾಡಿ ವ್ಯವಸ್ಥೆ (Nadi System)ಬಲಿಷ್ಠಗೊಳ್ಳುತ್ತದೆ. ಇದು ಮೂಳೆಗಳನ್ನು ಸದೃಢವಾಗಿ ಇರಿಸುತ್ತದೆ
* ಬೆಲ್ಲದಲ್ಲಿರುವ ಕಬ್ಬಿಣ (Iron), ಫಾಸ್ಫರಸ್ (phosphorus)ಅಂಶ ರಕ್ತಹೀನತೆ ಸಮಸ್ಯೆ ಎದುರಾಗದಂತೆ ತಡೆಯುತ್ತದೆ. ಇದು ರಕ್ತವೃದ್ಧಿಗೆ ಅನುಕೂಲಕಾರಿ. ಜೊತೆಗೆ ರಕ್ತದ ಶುದ್ಧಿಕರಣ ಮಾಡುವ ಗುಣವೂ ಇದಕ್ಕಿದೆ.
* ಗರ್ಭಿಣಿಯರಿಗೆ ಬೆಲ್ಲ ಉತ್ತಮ.. ಇದನ್ನು ಆಹಾರದ ಜೊತೆ ತೆಗೆದುಕೊಳ್ಳುವುದರಿಂದ ಹಲವು ವಿಧದ ರೋಗ, ಅಲರ್ಜಿಗಳಿಂದ ರಕ್ಷಣೆ ಮಾಡುತ್ತದೆ
* ಸಕ್ಕರೆ ಬದಲು ಬೆಲ್ಲ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ (Blood sugar) ನಿಯಂತ್ರಣದಲ್ಲಿಯೇ ಇರುತ್ತದೆ.
* ಬೆಲ್ಲದಲ್ಲಿ ಆಂಟಿ ಆಕ್ಸಿಡೆಂಟ್ಗಳು (Anti Accidents )ಹೆಚ್ಚಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು (Immunity power) ಹೆಚ್ಚಿಸುತ್ತದೆ