No Result
View All Result
ಕೇಂದ್ರ ಸರ್ಕಾರ ಕೊಟ್ಟಿರುವ ಮಾಹಿತಿ ಪ್ರಕಾರ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆಗೊಳಗಾದವರ ಪ್ರಮಾಣ ಶೇಕಡಾ 6.42ರಷ್ಟು ಮಾತ್ರ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೆವಾಲಾ ಅವರು ಕೇಳಿದ ಪ್ರಶ್ನೆ ಕೇಂದ್ರ ಹಣಕಾಸು ಸಚಿವಾಲಯ ಕೊಟ್ಟಿರುವ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
2019ರಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ 50 ಪ್ರಕರಣ ದಾಖಲಾಗಿದೆ. 2020ರಲ್ಲಿ 106, 2021ರಲ್ಲಿ 128, 2022ರಲ್ಲಿ 182, 2023ರಲ್ಲಿ 239 ಪ್ರಕರಣ ದಾಖಲಾಗಿದೆ. ಈ ವರ್ಷ ಅಕ್ಟೋಬರ್ 31ರವರೆಗೆ 206 ಪ್ರಕರಣ ದಾಖಲಾಗಿದೆ.
ಅಂದರೆ ಕಳೆದ ಐದು ವರ್ಷಗಳಲ್ಲಿ 911 ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಈಡಿ.
ಈ 911 ಪ್ರಕರಣಗಳಲ್ಲಿ 257 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇದೆ. ವಿಚಾರಣೆ ಮುಗಿದಿರುವ 654 ಪ್ರಕರಣಗಳಲ್ಲಿ ಕೇವಲ 42 ಪ್ರಕರಣಗಳಲ್ಲಷ್ಟೇ ಅಂದರೆ ಶೇಕಡಾ 6.42ರಷ್ಟು ಪ್ರಕರಣಗಳಲ್ಲಷ್ಟೇ ಅಪರಾಧ ಸಾಬೀತಾಗಿದ್ದು, 99 ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಡಿಸೆಂಬರ್ 4ರ ಅಂಕಿಅಂಶದ ಪ್ರಕಾರ ದೇಶದಲ್ಲಿ 106 ಪಿಎಂಎಲ್ಎ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.
2019ಕ್ಕೆ ಹೋಲಿಸಿದ್ರೆ ಈಡಿ ದಾಖಲಿಸಿಕೊಂಡಿರುವ ಪ್ರಕರಣ ಕಳೆದ 4 ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ.
ಅಕ್ರಮ ಹಣ ವರ್ಗಾವಣೆ, ಅಕ್ರಮ ವಿದೇಶಿ ವಿನಿಮಯ ಮತ್ತು ಬೇನಾಮಿ ಆಸ್ತಿ ಒಳಗೊಂಡಂತೆ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ಶೋಧ ಕೈಗೊಂಡು ಆರೋಪಿಗಳನ್ನು ಬಂಧಿಸಿ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಆಧೀನದಲ್ಲಿ ಬರುವ ಜಾರಿ ನಿರ್ದೇಶನಾಲಯದ ಪ್ರಕರಣ ದಾಖಲಾದರೆ ಭಯಬೀಳುವವರೇ ಹೆಚ್ಚು. ಆದರೆ ಇಷ್ಟೊಂದು ಪ್ರಭಾವಶಾಲಿ ತನಿಖಾ ಸಂಸ್ಥೆ ತಾನು ದಾಖಲಿಸಿದ್ದ ಪ್ರಕರಣಗಳ ಸಾಬೀತಿನಲ್ಲಿ ನ್ಯಾಯಾಲಯದಲ್ಲಿ ಮುಗ್ಗರಿಸ್ತಿರುವುದು ಸ್ಪಷ್ಟವಾಗುತ್ತಿದೆ.
No Result
View All Result
error: Content is protected !!