ಚೀನಾದ ಮೂಲದ ಮೊಬೈಲ್ ತಯಾರಿಕಾ ಕಂಪನಿ ಕ್ಸಿಯೋಮಿಗೆ (Xiaomi) ಜಾರಿ ನಿರ್ದೇಶನಾಲಯ (ED) ನೋಟಿಸ್ ಜಾರಿ ಮಾಡಿದೆ.
ವಿದೇಶಿ ವಿನಿಮಯ ನಿಯಮಗಳನ್ನು (FEMA) ಉಲ್ಲಂಘಿಸಿ ಕ್ಸಿಯೋಮಿ ಚೀನಾಕ್ಕೆ (China) 5,551.27 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಪಾವತಿ ಮಾಡಿದ್ದರ ಸಂಬಂಧ ಕಾರಣ ಕೇಳಿ ನೋಟಿಸ್ ಜಾರಿಯಾಗಿದೆ.
ಜೊತೆಗೆ ಕ್ಸಿಯೋಮಿ ಖಾತೆಗಳನ್ನು ಹೊಂದಿರುವ ಮೂರು ಬ್ಯಾಂಕ್ಗಳಿಗೂ ನೋಟಿಸ್ ಜಾರಿಯಾಗಿದೆ. ಸಿಟಿ ಬ್ಯಾಂಕ್, (Citi Bank) ಹೆಚ್ಎಸ್ಬಿಸಿ (HSBC Bank) ಮತ್ತು ಡಚೀಸ್ ಬ್ಯಾಂಕ್ (Deutsche Bank AG)ಗಳಿಗೆ ಈಡಿ (ED) ನೋಟಿಸ್ ನೀಡಿದೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಕ್ಸಿಯೋಮಿ ಬ್ಯಾಂಕ್ ಖಾತೆಗಳಲ್ಲಿ ಹೊಂದಿರುವ 5,551 ಕೋಟಿ ರೂಪಾಯಿಯನ್ನು ಈಡಿ ಜಪ್ತಿ ಮಾಡಿಕೊಂಡಿತ್ತು.
ADVERTISEMENT
ADVERTISEMENT