ಇಸ್ಲಾಮಿಕ್ ಸಂಘಟನೆ ಪಿಎಫ್ಐ ಮತ್ತು ಅದರ ಜೊತೆಗೆ ನಂಟು ಹೊಂದಿರುವ ರೆಹಾಬ್ ಫೌಂಡೇಷನ್ ಗೆ ಸೇರಿದ 33 ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಖಾತೆ ಜಪ್ತಿ ಆಗಿದೆ.
ಈ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 68 ಲಕ್ಷ ರೂಪಾಯಿ ಠೇವಣಿ ಇದೆ. ಪಿಎಫ್ಐಗೆ ಸೇರಿದ 23 ಖಾತೆಗಳಲ್ಲಿ 59 ಲಕ್ಷ ರೂಪಾಯಿ ಮತ್ತು ರೆಹಾಬ್ ಇಂಡಿಯಾ ಫೌಂಡೇಷನ್ಗೆ ಸೇರಿದ 10 ಖಾತೆಗಳಲ್ಲಿ 9 ಲಕ್ಷದ 50 ಸಾವಿರ ರೂಪಾಯಿ ಠೇವಣಿ ಇದೆ.