ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemanth Soren) ರವರ ಸದಸ್ಯತ್ವವನ್ನು ಚುನಾವಣಾ ಆಯೋಗ ರದ್ದುಪಡಿಸಿದೆ
ಈ ಮೂಲಕ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಮತ್ತು ಗಣಿ ಸಚಿವರಾಗಿ ಸೊರೇನ್ ಅವರು ತಮ್ಮ ಹೆಸರಲ್ಲಿ ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆದು ಕೊಂಡಿದ್ದರು.
ಈ ಮೂಲಕ ಲಾಭದಾಯಕ ಹುದ್ದೆ ಹೊಂದಬಾರದು ಮತ್ತು ಆ ಸಂಬಂಧ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 9ಎ ಅಡಿ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳ ಶಾಸಕ ಸ್ಥಾನ ರದ್ದುಪಡಿಸುವಂತೆ ಬಿಜೆಪಿ ರಾಜ್ಯಪಾಲರು ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ರಾಜ್ಯಪಾಲ ರಮೇಶ್ ಬೈಸ್ ಅವರು ಸಿಎಂ ಸೊರೆನ್ ಶಾಸಕ ಸ್ಥಾನ ರದ್ದತಿ ಸಂಬಂಧ ಚುನಾವಣಾ ಆಯೋಗದ (Election Commission) ಅಭಿಪ್ರಾಯ ಕೇಳಿದ್ದರು.
ಆ ಸಂಬಂಧ ಬಿಜೆಪಿ ಮತ್ತು JMM ಪಕ್ಷಗಳ ವಾದ ಆಲಿಸಿತ್ತು.
ಈ ಬಳಿಕ ಚುನಾವಣಾ ಆಯೋಗ ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ವರದಿ ನೀಡಿತ್ತು.
ಆ ವರದಿಯಲ್ಲಿ CM ಸೊರೇನ್ ಶಾಸಕತ್ವ ರದ್ದುಪಡಿಸುವಂತೆ ಶಿಫಾರಸು ಮಾಡಲಾಗಿದೆ.