ಲೋಕಸಭಾ ಚುನಾವಣೆ ಹೊತ್ತಲ್ಲಿ ಚುನಾವಣಾ ಬಾಂಡ್ನ ಮುಚ್ಚಿಟ್ಟಿದ್ದ ನಿಗೂಢ ರಹಸ್ಯಗಳೆಲ್ಲವೂ ಒಂದರ ಮೇಲೊಂದರಂತೆ ಬಯಲಾಗುತ್ತಿದೆ.
ದೇಶದ ಸರ್ವೋಚ್ಛ ನ್ಯಾಯಾಲಯ ಬೀಸಿದ ಚಾಟಿಗೆ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್ಗಳ ರಹಸ್ಯ ಅಂಕಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಆ ರಹಸ್ಯ ಅಂಕಿಗಳನ್ನು ನಿನ್ನೆಯಷ್ಟೇ ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಈ ಮೂಲಕ ಯಾರು ಖರೀದಿಸಿದ ದೇಣಿಗೆ ಯಾವ ಪಕ್ಷದ ಪಾಲಾಗಿದೆ ಎಂಬ ನಿಗೂಢಗಳೆಲ್ಲವೂ ಈಗ ಸಾರ್ವಜನಿಕವಾಗಿದೆ.
2019ರ ಏಪ್ರಿಲ್ನಿಂದ ಇದೇ ವರ್ಷದ ಮಾರ್ಚ್ವರೆಗೆ ಖರೀದಿ ಮಾಡಲಾದ ಮತ್ತು ಪಕ್ಷಗಳು ತಮ್ಮ ಖಾತೆಗೆ ಜಮೆ ಮಾಡಿಕೊಂಡ ಬಾಂಡ್ಗಳ ಮಾಹಿತಿಯನ್ನು ಅಲ್ಫಾನ್ಯೂಮೆರಿಕ್ ಸಂಖ್ಯೆ ಎಸ್ಬಿಐ ಬಹಿರಂಗಪಡಿಸಿದೆ.
ಈ ಮಾಹಿತಿಗಳ ಪ್ರಕಾರ ಕೇವಲ 5 ವರ್ಷಗಳಲ್ಲಿ ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ಸಿಕ್ಕಿದ್ದು 6,060 ಕೋಟಿ ರೂಪಾಯಿ.
ಬಿಜೆಪಿಗೆ ಅತ್ಯಧಿಕ ದೇಣಿಗೆ ಕೊಟ್ಟವರು:
ಟಿವಿ9 ಚಾನೆಲ್ಗಳ ಮಾಲೀಕತ್ವ ಹೊಂದಿರುವ ಕಂಪನಿ ಮೇಘಾ ಇಂಜಿನಿಯರಿಂಗ್ – 584 ಕೋಟಿ ರೂ.
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಪಾಲುದಾರಿಕೆ ಇರುವ ಕ್ವಿಕ್ ಸಪ್ಲೈ ಚೈನ್ ಕಂಪನಿ – 375 ಕೋಟಿ ರೂ.
ವೇದಾಂತ – 226 ಕೋಟಿ ರೂಪಾಯಿ
ಭಾರತಿ ಏರ್ಟೆಲ್ – 197 ಕೋಟಿ ರೂಪಾಯಿ
ಮದನ್ಲಾಲ್ ಲಿಮಿಟೆಡ್ – 175 ಕೋಟಿ ರೂಪಾಯಿ
ಕೆವೆಂಟರ್ ಫುಡ್ ಪಾರ್ಕ್ – 144 ಕೋಟಿ ರೂಪಾಯಿ
ಡಿಎಲ್ಎಫ್ – 130 ಕೋಟಿ ರೂಪಾಯಿ
ಬಿರ್ಲಾ ಕಾರ್ಬನ್ – 105 ಕೋಟಿ ರೂಪಾಯಿ
ಫ್ಯೂಚರ್ ಗೇಮಿಂಗ್ – 100 ಕೋಟಿ ರೂಪಾಯಿ
ಹಾಲ್ಡಿಯಾ ಎನರ್ಜಿ -81 ಕೋಟಿ ರೂಪಾಯಿ
ಚುನಾವಣಾ ಬಾಂಡ್ ಮೂಲಕ ಅತೀ ಹೆಚ್ಚು ದೇಣಿಗೆ ಪಡೆದ 2ನೇ ಪಕ್ಷ ಅದು ತೃಣಮೂಲ ಕಾಂಗ್ರೆಸ್. ಐದು ವರ್ಷಗಳಲ್ಲಿ ಟಿಎಂಸಿ ಪಡೆದಿರುವ ದೇಣಿಗೆ 1,610 ಕೋಟಿ ರೂ.
ಫ್ಯೂಚರ್ ಗೇಮಿಂಗ್ – 542 ಕೋಟಿ ರೂ.
ಹಾಲ್ಡಿಯಾ ಎನರ್ಜಿ – 281 ಕೋಟಿ ರೂ.
ಧಾರಿವಾಲ್ ಇನ್ಫಾಸ್ಟ್ರಕ್ಚರ್ – 90 ಕೋಟಿ ರೂ.
ಎಂಕೆಜೆ ಎಂಟರ್ಪ್ರೈಸಸ್ – 45 ಕೋಟಿ ರೂ.
ಅವೀಸ್ ಟ್ರೇಡಿಂಗ್ – 45 ಕೋಟಿ ರೂ.
ಐಎಫ್ಬಿ ಆಗ್ರೋ – 42 ಕೋಟಿ ರೂ.
ಚೆನ್ನೈ ಗ್ರೀನ್ ವುಡ್ಸ್ – 40 ಕೋಟಿ ರೂ.
ಪ್ರಾರಂಭ್ ಸೆಕ್ಯೂರಿಟೀಸ್ – 38 ಕೋಟಿ ರೂ.
ಕ್ರೆಸೆಂಟ್ ಪವರ್ ಲಿಮಿಟೆಡ್ – 33 ಕೋಟಿ ರೂ.
ಕಾಂಗ್ರೆಸ್ಗೆ ಚುನಾವಣಾ ಬಾಂಡ್ಗಳ ಮೂಲಕ 1,422 ಕೋಟಿ ರೂಪಾಯಿಯಷ್ಟು ದೇಣಿಗೆ ಬಂದಿದೆ.
ವೆಸ್ಟರ್ನ್ ಯುಪಿ ಪವರ್ – 110 ಕೋಟಿ ರೂ.
ವೇದಾಂತ – 104 ಕೋಟಿ ರೂ.
ಎಂಕೆಜೆ ಎಂಟರ್ಪ್ರೈಸಸ್ – 91 ಕೋಟಿ ರೂ.
ಯಶೋಧ ಸೂಪರ್ ಸ್ಪೆಷಾಲಿಟಿ – 64 ಕೋಟಿ ರೂ.
ಆವೀಸ್ ಟ್ರೇಡಿಂಗ್ – 53 ಕೋಟಿ ರೂ.
ಫ್ಯೂಚರ್ ಗೇಮಿಂಗ್ – 50 ಕೋಟಿ ರೂ.
ಸಸ್ಮಾಲ್ ಇನ್ಫಾಸ್ಟ್ರಕ್ಚರ್ – 39 ಕೋಟಿ ರೂ.
ರಿತ್ವಿಕ್ ಪ್ರಾಜೆಕ್ಟ್ಸ್ – 30 ಕೋಟಿ ರೂ.
ಎಇಪಿಸಿ ಪವರ್ – 30 ಕೋಟಿ ರೂ.
ಸಿದ್ಧಿ ಟ್ರೇಡಿಂಗ್ – 22 ಕೋಟಿ ರೂ.