ರಾಜ್ಯದಲ್ಲಿ ಮತ್ತೆ ವಿದ್ಯುತ್ ಬೆಲೆ ಏರಿಕೆ ಆಗಲಿದೆ. ಜುಲೈ 1ರಿಂದ ಹೊಸ ದರ ಜಾರಿಗೆ ಬರಲಿದೆ. ಕೇವಲ 6 ತಿಂಗಳ ಅಂತರದಲ್ಲಿ ವಿದ್ಯುತ್ ಬೆಲೆ ಮತ್ತೆ ಏರಿಕೆ ಆಗುತ್ತಿದೆ.
100 ಯುನಿಟ್ ಬಳಸಿದರೆ ಆಗ ಎಸ್ಕಾಂಗಳ ದರ ಪಟ್ಟಿ ಪ್ರಕಾರ 19 ರೂಪಾಯಿಯಿಂದ 31 ರೂಪಾಯಿವರೆಗೆ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ.
ಬೆಲೆ ಏರಿಕೆ ಸಂಬAಧ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಮುಂದಿಟ್ಟಿದ್ದ ಪ್ರಸ್ತಾಪವನ್ನು ಕರ್ನಾಟಕ ವಿದುಚ್ಛಕ್ತಿ ಆಯೋಗ ಅನುಮೋದಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಯುನಿಟ್ ಗೆ 31 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ 27 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 26 ಪೈಸೆ, ಮೆಸ್ಕಾಂ ವ್ಯಾಪ್ತಿಯಲ್ಲಿ 21 ಪೈಸೆ ಮತ್ತು ಸಿಇಎಸ್ಇ ವ್ಯಾಪ್ತಿಯಲ್ಲಿ ಯುನಿಟ್ ಗೆ 19 ಪೈಸೆ ಹೆಚ್ಚಳ ಆಗಲಿದೆ.
ಹೊಸ ದರ ಜುಲೈ 1ರಿಂದ ಜಾರಿಗೆ ಬರಲಿದೆ.
ವಿದ್ಯುತ್ ಉತ್ಪಾದಕ ಕಂಪನಿಗಳಿಗೆ ದುಬಾರಿ ಕಲ್ಲಿದ್ದಲು ಸರಬರಾಜು ಆಗುತ್ತಿರುವ ಹಿನ್ನೆಲೆಯಲ್ಲಿ ಎಸ್ಕಾಂಗಳು ವಿದ್ಯುತ್ ಖರೀದಿಯೂ ದುಬಾರಿ ಆಗಿದೆ.