44 ಬಿಲಿಯನ್ ಡಾಲರ್ಗೆ ಟ್ವಿಟರ್ ಅನ್ನು ಖರೀದಿಸುವ ಟೆಸ್ಲಾ ಸಿಇಒ ಇಲಾನ್ ಮಸ್ಕ್ (Elon Musk) ಅವರ ಒಪ್ಪಂದವನ್ನು ಟ್ವಿಟರ್ ಷೇರುದಾರರು ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಹಂತದಲ್ಲಿ ಟ್ವಿಟರ್ ಖರೀದಿ ಒಪ್ಪಂದವನ್ನು ಅನುಮೋದಿಸಲು ಬೇಕಾದಷ್ಟು ಮತಗಳನ್ನು ಗಿಟ್ಟಿಸಿವೆ ಎಂಬುದನ್ನು ಟ್ವಿಟರ್ ಸಂಸ್ಥೆ ದೃಢಪಡಿಸಿದೆ.
ಟ್ವಿಟರ್ ಖರೀದಿ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಇಲಾನ್ ಮಸ್ಕ್ ವಿರುದ್ಧ ಟ್ವಿಟರ್ ದಾವೆ ಹೂಡಿತ್ತು. ಸದ್ಯ ಈ ಪ್ರಕರಣ ಕೋರ್ಟ್ ಹಂತದಲ್ಲಿದೆ. ಇಲಾನ್ ಮಸ್ಕ್-ಟ್ವಿಟರ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ. ಅಕ್ಟೋಬರ್ ಮಧ್ಯಂತರ ಅವಧಿಯಲ್ಲಿ ಕಾನೂನು ಸಮರ ಆರಂಭವಾಗುವ ನಿರೀಕ್ಷೆಯಿದೆ.
ಪ್ರತಿ ಷೇರಿಗೆ 54.20 ಡಾಲರ್ ನೀಡುವ ಮೂಲಕ ಟ್ವಿಟರ್ ಖರೀದಿಗೆ ಮಸ್ಕ್ (Elon Musk) ಮುಂದಾಗಿದ್ದರು. ಬಳಿಕ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿ ಖರೀದಿ ಒಪ್ಪಂದವನ್ನು ಕೈಬಿಟ್ಟಿದ್ದರು. ಇದನ್ನೂ ಓದಿ : ಟ್ವಿಟರ್ ಖರೀದಿಯಿಂದ ಹಿಂದೆ ಸರಿದ ಎಲಾನ್ ಮಸ್ಕ್