ಇಂಗ್ಲೆಂಡ್ ತಂಡದ ಮಹಿಳಾ ಕ್ರಿಕೆಟ್ ಆಟಗಾರ್ತಿಯರಾದ ಕ್ಯಾಥರಿನ್ ಬ್ರಂಟ್ ಮತ್ತು ನ್ಯಾಟ್ ಸಿವರ್ ಮದುವೆ ಆಗಿದ್ದಾರೆ.
ಇವರಿಬ್ಬರೂ 2017ರಲ್ಲಿ ವಿಶ್ವಕಪ್ ಗೆದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು.
ಇವರಿಬ್ಬರ ಮದುವೆಯ ಫೋಟೋವನ್ನು ಹಂಚಿಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ಆಡಳಿತ ಮಂಡಳಿ ಇಬ್ಬರಿಗೂ ಅಭಿನಂದನೆ ಸಲ್ಲಿಸಿದೆ.
ಈ ಹಿಂದೆ ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ಆಟಗಾರ್ತಿಯರಾದ ಮರಿಜನ್ನೆ ಕಾಪ್ ಮತ್ತು ನಿಕರ್ಕ್, ನ್ಯೂಜಿಲೆಂಡ್ನ ಆಟಗಾರ್ತಿಯರಾದ ಆಮಿ ಸ್ಯಾರ್ಥ್ವೈಟ್ ಮತ್ತು ಲಿಯಾ ತಹುಹು ಮದುವೆ ಆಗಿದ್ದರು.