ಬೆಂಗಳೂರು: ಸ್ಯಾಂಡಲ್ವುಡ್ ಚಾಲೆಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಕಾಟೇರ ತೆರೆ ಕಂಡಿದ್ದು, ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಮೊದಲ ಶೋನಿಂದಲೇ ದಚ್ಚು ಸಿನಿಮಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಡಿಬಾಸ್ ಘರ್ಜನೆ ಜೋರಾಗುವ ನಿರೀಕ್ಷೆ ಇದೆ.
ಇದರ ನಡುವೆ ಕಾಟೇರ ಸಿನಿಮಾವನ್ನು ವೀಕ್ಷಿಸಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು, ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ʼಕಾಟೇರʼನನ್ನು ಹಾಡಿ ಹೊಗಳಿದ್ದಾರೆ.
ಈಗಷ್ಟೇ ನಾನು “ಕಾಟೇರ” ಸಿನಿಮಾ ವೀಕ್ಷಿಸಿದೆ, ಸಿನಿಮಾ ಅದ್ಭುತವಾಗಿದೆ. ಅನೇಕ ದೃಶ್ಯಗಳನ್ನು ನೋಡಿ ನಾನು ಕಣ್ಣೀರು ಹಾಕಿದ್ದೇನೆ, ಸಿನಿಮಾ ನೋಡಿ ನಾನು ಹೊರನಡೆಯುತ್ತಿದ್ದಂತೆ ದರ್ಶನ್ ಅವರ ಶ್ರಮದ ಬಗ್ಗೆ ಹೆಮ್ಮೆ ಮತ್ತು ಗೌರವ ಹೆಚ್ಚಾಯಿತು. ತರುಣ್, “ಕಾಟೇರ” ನಿಮ್ಮ ಅತ್ಯುತ್ತಮ ಚಿತ್ರ ಎಂದು ಹಾಡಿ ಹೊಗಳಿದ್ದಾರೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾದಲ್ಲಿ ದರ್ಶನ್ಗೆ ಜೊತೆಯಾಗಿ ಮೊದಲ ಬಾರಿಗೆ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಟಿಸಿದ್ದಾರೆ. ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದು, ವಿ. ಹರಿಕೃಷ್ಣ ಸಂಗೀತ ನಿರ್ದೇಶನವಿದೆ. ಇಂದು ತೆರೆಕಂಡ ಸಿನಿಮಾಗೆ ಮುಂದಿನ ದಿನಗಳಲ್ಲಿ ಹೇಗೆ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನ ಕಾಯ್ದು ನೋಡಬೇಕಿದೆ.