ಬಾಲಿವುಡ್ ತಾರಾ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕ್ರಿಸ್ಮಸ್ ಸಂದರ್ಭದಲ್ಲಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಒಂದನ್ನು ನೀಡಿದ್ದು, ತಮ್ಮ ಪ್ರೀತಿಯ ಮಗಳು ರಹಾಳನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಹೌದು ಇಂದು ಕಪೂರ್ ಕುಟುಂಬ ಕ್ರಿಸ್’ಮಸ್ ಲಂಚ್ ಆಯೋಜನೆ ಮಾಡಿತ್ತು. ಈ ಸಂದರ್ಭದಲ್ಲಿ ಜೋಡಿಯು ಮೊಟ್ಟಮೊದಲ ಬಾರಿಗೆ ಪಾಪರಾಜಿಗಳ ಮುಂದೆ ರಹಾಳ ಕರೆತಂದಿದ್ದು, ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಣಬೀರ್ ಮತ್ತು ಆಲಿಯಾ ತಮ್ಮ ಪುಟ್ಟ ಮಗಳನ್ನು ಕರೆದುಕೊಂಡು ಮಾಧ್ಯಮಗಳ ಮುಂದೆ ಬಂದಿದ್ದು, ರಹಾಳನ್ನು ಕಂಡ ಅಭಿಮಾನಿಗಳು, ಥೇಟ್ ದಂತದ ಗೊಂಬೆಯಂತೇ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಲ್ಲದೇ ರಾಹಾಳ ಕಣ್ಣುಗಳು ಅತ್ತೆ ಅಂದರೆ ರಣಬೀರ್ ಸೋದರಿ ಕರೀಷ್ಮಾ ಕಪೂರ್ರಂತೆ ಬೆಕ್ಕಿನ ಕಣ್ಣನ್ನು ಹೋಲುತ್ತಿದ್ದು, ಅನೇಕರು ಆಕೆಯನ್ನು ಕರೀಷ್ಮಾಗೆ ಹೋಲಿಸುತ್ತಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ರಾಹಾಳನ್ನು ಅಜ್ಜ ರಣಬೀರ್ ತಂದೆ ರಿಷಿ ಕಪೂರ್ಗೆ ಹೋಲಿಸುತ್ತಿದ್ದಾರೆ
ಇನ್ನು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು 2022ರ ಏಪ್ರಿಲ್ 14ರಂದು ವಿವಾಹವಾಗಿದ್ದರು. ನವೆಂಬರ್ 6, 2022ರಂದು ಇವರಿಗೆ ರಾಹಾ ಎಂಬ ಮಗಳು ಜನಿಸಿದ್ದಾಳೆ. ಕಳೆದ ತಿಂಗಳು ರಾಹಾ ತನ್ನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಆ ಸಮಯದಲ್ಲಿಯೂ ಇವರು ಮಗುವಿನ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ತಮ್ಮ ಮಗಳ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ.