ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ನೇಹಿತ್ ಆಟ ಮುಗಿದಿದ್ದು, ಈ ವಾರ ದೊಡ್ಮನೆಯಿಂದ ಸ್ನೇಹಿತ್ ಗೌಡ ಔಟ್ ಆಗಿ ಹೊರ ಬಂದಿದ್ದಾರೆ.
ಹೌದು ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಗೌಡ ಅವರು ಬಿಗ್ ಬಾಸ್ ಜರ್ನಿ ಅಂತ್ಯವಾಗಿದ್ದು, ದೊಡ್ಮನೆಯಿಂದ ಹೊರಡುವ ವೇಳೆ ಭಾವುಕರಾಗಿ ಸ್ನೇಹಿತ್ ಕಣ್ಣೀರು ಹಾಕಿದ್ದಾರೆ. ಈ ವೇಳೆ ಅವರನ್ನು ನೋಡಿ ಅವರ ಸ್ನೇಹಿತೆ ನಮ್ರತಾ ಗೌಡ ಕೂಡ ಕಣ್ಣೀರಿಟ್ಟಿದ್ದು, ನಮ್ರತಾ ಜತೆ ಹೆಚ್ಚು ಕ್ಲೋಸ್ ಆಗಿದ್ದ ಸ್ನೇಹಿತ್, ವಿನಯ್, ಮೈಕಲ್ ಜತೆಗೂ ಆತ್ಮೀಯರಾಗಿದ್ದರು.
ಬೇಸರದಲ್ಲಿದ್ದ ನಮ್ರತಾ ಅವರನ್ನು ಸ್ನೇಹಿತ್ ಸಮಾಧಾನ ಮಾಡಿ, ಹೊರಡುವಾಗ ವಿನಯ್ ಗೆ ಗೆದ್ದು ಬನ್ನಿ ಬ್ರೋ ಎಂದು ಹೇಳುತ್ತಾ ಭಾವುಕರಾಗಿ ಸ್ನೇಹಿತ್ ಮನೆಯಿಂದ ಆಚೆ ಹೋದರು.
ಸುದೀಪ್ ಬಳಸಿದ ಸ್ಪೆಷಲ್ ಅಧಿಕಾರದಿಂದ ಕಳೆದ ವಾರ ಎಲಿಮಿನೇಷನ್ ಯಿಂದ ಪಾರಾಗಿದ್ದ ಸ್ನೇಹಿತ್ ಗೆ ಈ ವಾರ ಲಕ್ ಕೈ ಕೊಟ್ಟಿದ್ದು, ನಾಮಿನೇಟ್ ಪಟ್ಟಿಯಲ್ಲಿ ಕೊನೆದಾಗಿ ಉಳಿದುಕೊಂಡಿದ್ದ ಅವಿನಾಶ್ ಶೆಟ್ಟಿ ಮತ್ತು ಸ್ನೇಹಿತ್ ಪೈಕಿ ಅಂತಿಮವಾಗಿ ಅವಿನಾಶ್ ಶೆಟ್ಟಿ ಸೇಫ್ ಆದರೆ, ಸ್ನೇಹಿತ್ ಎಲಿಮಿನೇಟ್ ಆದರು.
ಇನ್ನು ಬಿಗ್ ಬಾಸ್ ಆರಂಭದಿಂದಲೂ ಸ್ನೇಹಿತ್ ಹೇಳಿಕೊಳ್ಳುವಂತಹ ಯಾವುದೇ ಪ್ರದರ್ಶನ ನೀಡಿರಲಿಲ್ಲ. ಒಮ್ಮೆ ಬಿಗ್ ಬಾಸ್ ಮನೆಯಿಂದ ಅವರನ್ನು ಔಟ್ ಮಾಡಿ ಎಂದು ವೀಕ್ಷಕರು ಹೇಳುತ್ತಿದ್ದರು.