ಅಂತರಾಷ್ಟ್ರೀಯ ಕ್ರಿಕೆಟ್ಗೆ ಏಕದಿನ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ‘ಇಯಾನ್ ಮೋರ್ಗನ್’ ಅವರು ಇಂದು ಮಂಗಳವಾರ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ಸೀಮಿತ ಓವರ್ಗಳ ತಂಡದ ನಾಯಕನಾಗಿರುವ ಇಯಾನ್ ಮೋರ್ಗನ್ ಅವರು ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. 2009 ರಲ್ಲಿ ಐರ್ಲೆಂಡ್ ವಿರುದ್ಧ ಟಿ-20 ಪಂದ್ಯದ ಮೂಲಕ ಇಂಗ್ಲೆಂಡ್ ತಂಡದ ಸದಸ್ಯನಾಗಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. 35 ವರ್ಷದ ಇಯಾನ್ ಮೋರ್ಗನ್ 13 ವರ್ಷಗಳ ಕಾಲ ಅಂತರಾಷ್ಟ್ರೀಯ ವೇದಿಕೆಯಲ್ಲಿ ಇಂಗ್ಲೆಂಡ್ ತಂಡ ಪ್ರತಿನಿಧಿಸಿದ್ದಾರೆ.
2015 ರಲ್ಲಿ ಅಲೆಸ್ಟರ್ ಕುಕ್ ಅವರ ನಂತರ ನಾಯಕನಾಗಿ ನೇಮಕವಾದ ನಂತರ, ಏಕದಿನದಲ್ಲಿ 126 ಪಂದ್ಯಗಳು, T20 ಕ್ರಿಕೆಟ್ನಲ್ಲಿ 72 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ.
You’ve changed English cricket forever.
An innovator 🏏 A motivator 💪 A champion 🏆
Your legacy will live on…#ThankYouMorgs ❤️ pic.twitter.com/a32SSvCDXI
— England Cricket (@englandcricket) June 28, 2022
ಇಯಾನ್ ಮೋರ್ಗನ್ ಸೀಮಿತ ಓವರ್ಗಳ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು 340 ಬಾರಿ ಪ್ರತಿನಿಧಿಸಿದ್ದಾರೆ. ಇವರು 2010 ಟಿ20 ಗೆದ್ದ ತಂಡದ ಸದಸ್ಯರಾಗಿದ್ದರು. 2019 ರಲ್ಲಿ ಇವರ ನಾಯಕತ್ವದಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು.
ಮೋರ್ಗನ್ ಅವರು ಏಕದಿನ ಮತ್ತು ಟಿ20 ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ನ ಪುರುಷರ ಸಾರ್ವಕಾಲಿಕ ಪ್ರಮುಖ ರನ್-ಸ್ಕೋರರ್ ಮತ್ತು ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ.
ಇವರು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು 225 ಏಕದಿನ, 115 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಏಕದಿನ ಪಂದ್ಯಗಳ ಮೂಲಕ 7,701 ರನ್ ಬಾರಿಸಿದ್ದಾರೆ. ಟಿ20ಯಲ್ಲಿ 2,458 ರನ್ಗಳನ್ನು ಬಾರಿಸಿದ್ದಾರೆ. 16 ಟೆಸ್ಟ್ ಪಂದ್ಯಗಳನ್ನು ಆಡಿ 700 ರನ್ ಬಾರಿಸಿದ್ದಾರೆ.