`ಸಾರ್ವಜನಿಕ ಸ್ಥಳವನ್ನು ಒಂದು ವೇಳೆ ದೇವರೇ ಅತಿಕ್ರಮಿಸಿಕೊಂಡರೂ ನ್ಯಾಯಾಲಯ ಅಂತಹ ಒತ್ತುವರಿಯನ್ನು ತೆರವು ಮಾಡುವಂತೆ ಆದೇಶಿಸುತ್ತದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ನೆಲದ ಕಾನೂನನ್ನು ನ್ಯಾಯಾಲಯಗಳು ಎತ್ತಿ ಹಿಡಿಯುತ್ತವೆ’ ಎಂದು ಮದ್ರಾಸ್ ಹೈಕೋರ್ಟ್ ಎಕಸದಸ್ಯ ಪೀಠ ಹೇಳಿದೆ.
ಮಾರಿಯಮ್ಮ ದೇವಸ್ಥಾನಕ್ಕಾಗಿ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದರ ಸಂಬAಧದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರಿದ್ದ ಏಕಸದಸ್ಯು ಪೀಠ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವಂತೆ ದೇವಸ್ಥಾನಕ್ಕೆ ಸೂಚಿಸಿದೆ. ಒಂದು ವೇಳೆ ದೇವಸ್ಥಾನ ಒತ್ತುವರಿ ತೆರವುಗೊಳಿಸದೇ ಇದ್ದಲ್ಲಿ ನಗರಪಾಲಿಕೆ ಸಾರ್ವಜನಿಕ ರಸ್ತೆಯನ್ನು ಜನರಿಗೆ ಮುಕ್ತ ಮಾಡುವಂತೆ ಆದೇಶಿಸಿದೆ.
`ಸಾರ್ವಜನಿಕ ಸ್ಥಳವನ್ನು ದೇವಸ್ಥಾನ ನಿರ್ಮಿಸಿ ಅಥವಾ ದೇವರ ಮೂರ್ತಿಯನ್ನು ಇಟ್ಟು ಅತಿಕ್ರಮಿಸಿಕೊಳ್ಳಬಹುದು ಎಂಬ ಭಾವನೆ ಕೆಲವರಲ್ಲಿತ್ತು. ನಮ್ಮಲ್ಲಿ ಸಾಕಷ್ಟು ದೇವಸ್ಥಾನಗಳಿವೆ, ಸಾರ್ವಜನಿಕ ಸ್ಥಳಗಳನ್ನು ಹೊಸ ದೇವಸ್ಥಾನ ಕಟ್ಟಿ ಎಂದು ದೇವರು ನಮ್ಮಲ್ಲಿ ಕೇಳಿಕೊಂಡಿಲ್ಲ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.