ಡಿಯರ್ ವಿಕ್ರಮ್ ಸಿನಿಮಾ ವೀಕ್ಷಣೆಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಟ ನೀನಾಸಂ ಸತೀಶ್ ಆಹ್ವಾನ ನೀಡಿದ್ದಾರೆ.
`ಇಂತಹ ಸಿನಿಮಾಗಳು ಹೆಚ್ಚಾಗಲಿ’ ಎಂದು ಸಿದ್ದರಾಮಯ್ಯ ಅವರು ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರನಟ ನೀನಾಸಂ ಸತೀಶ್ ಅವರು ಇಂದು ನನ್ನನ್ನು ಭೇಟಿಮಾಡಿ ಜೂನ್ ೩೦ ರಂದು ತೆರೆ ಕಾಣಲಿರುವ ತಾವು ನಾಯಕ ನಟನಾಗಿ ಅಭಿನಯಿಸಿರುವ, ಕೆ.ಎಸ್. ನಂದೀಶ್ ನಿರ್ದೇಶನದ ‘ಡಿಯರ್ ವಿಕ್ರಮ್’ ಸಿನಿಮಾ ವೀಕ್ಷಿಸಲು ಆಹ್ವಾನ ನೀಡಿದರು.
ಪ್ರಗತಿಪರ ಆಶಯಗಳೊಂದಿಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಈ ಚಿತ್ರ ಯಶಸ್ವಿಯಾಗಲಿ, ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ’ ಎಂದು ಸಿದ್ದರಾಮಯ್ಯ ಅವರು ಹಾರೈಸಿದ್ದಾರೆ.
ಭೇಟಿ ವೇಳೆ ಸಾಹಿತಿ ನಟರಾಜ್ ಹುಳಿಯಾರ್ ಅವರು ಹಾಜರಿದ್ದರು.