ತಮಗಿಂತ 28 ವರ್ಷ ಕಿರಿಯಯವಳಾಗಿರುವ ಶಾಲಾ ಶಿಕ್ಷಕಿ ಮತ್ತು ತಮ್ಮ ದೀರ್ಘ ಕಾಲದ ಸ್ನೇಹಿತೆ ಬುಲ್ಬುಲ್ ಸಾಹಾ ಅವರನ್ನು ಮಾಜಿ ಕ್ರಿಕೆಟಿಗ 62 ವರ್ಷದ ಅರುಣ್ ಲಾಲ್ ಮದುವೆ ಆಗಿದ್ದಾರೆ.
ಅರುಣ್ ಲಾಲ್ ಅವರಿಗೆ ಇದು ಎರಡನೇ ಮದುವೆ ಆಗಿದ್ದು, ಇವರು ಮೊದಲನೇ ಪತ್ನಿ ರೀನಾ ಅವರಿಂದ ದೂರವಾಗಿದ್ದಾರೆ. ಆದರೆ ರೀನಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮೊದಲ ಪತ್ನಿಯ ಆರೈಕೆ ಮಾಡುತ್ತಿರುವ ಅರುಣ್ಲಾಲ್ ಆಕೆಯ ಒಪ್ಪಿಗೆ ಪಡೆದೇ ಎರಡನೇ ಮದ್ವೆ ಆಗಿದ್ದಾರೆ.
ಬುಲ್ಬುಲ್ ಸಾಹಾ ಅವರು ಕೋಲ್ಕತ್ತಾದಲ್ಲಿ ಶಿಕ್ಷಕಿಯಾಗಿದ್ದಾರೆ. `ಅಧಿಕೃತವಾಗಿ ಮಿಸಸ್ ಲಾಲ್. ಬೆಂಬಲಿಸಿದ ಕುಟುಂಬದವರಿಗೂ, ಸ್ನೇಹಿತರಿಗೂ ಧನ್ಯವಾದಗಳು’ ಸಾಹಾ ಅವರು ಬರೆದುಕೊಂಡಿದ್ದಾರೆ.
ಭಾರತದ ಪರವಾಗಿ 16 ಟೆಸ್ಟ್ ಪಂದ್ಯ ಮತ್ತು 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ಅವರು ಪಶ್ಚಿಮ ಬಂಗಾಳ ರಣಜಿ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಅದ್ಭುತ ರಣಜಿ ಆಟಗಾರರಾಗಿದ್ದ ಇವರು ರನ್ ಗಳಿಕೆಯ ಸರಾಸರಿಯಲ್ಲಿ ಐದನೇ ಸ್ಥಾನದಲ್ಲಿದ್ದು, 6,760 ರನ್ ಗಳಿಸಿದ್ದಾರೆ. ಕ್ರಿಕೆಟ್ ನಿವೃತ್ತಿಯ ಬಳಿಕ ಇವರು ಕ್ರಿಕೆಟ್ ವೀಕ್ಷಣೆ ವಿವರಣೆಗಾರರಾಗಿಯೂ ಕೆಲಸ ಮಾಡಿದ್ದರು.