ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಆಘಾತವಾಗಿದೆ.
ಬಿಜೆಪಿ ಪಕ್ಷದ ಮಾಜಿ ಸಂಸದ ಡಾ ಜಿ ವಿವೇಕಾನಂದ (G. Vivekanand) ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ಸಚಿವರೂ ಆಗಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಭಾರದ ಹೃದಯದೊಂದಿಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಜಿ ವಿವೇಕ್ ವೆಂಕಟಸ್ವಾಮಿ ಎಂದೂ ಕರೆಯಲಾಗುವ ಈ ನಾಯಕ 2004 ಮತ್ತು 2009ರಲ್ಲಿ ತೆಲಂಗಾಣದ ಪೆಡಪಲ್ಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದಲೇ ಗೆದ್ದು ಸಂಸದರಾಗಿದ್ದರು.
2019ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಇವರು ಈಗ ಮತ್ತೆ ಕಾಂಗ್ರೆಸ್ಗೆ ಮರಳುತ್ತಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ಇವರು ವಿ6 ತೆಲುಗು ನ್ಯೂಸ್ ಚಾನೆಲ್ನ ಮಾಲೀಕರೂ ಹೌದು. ಹೈದ್ರಾಬಾದ್ ಕ್ರಿಕೆಟ್ ಸಂಘದ ಅಧ್ಯಕ್ಷರೂ ಆಗಿದ್ದರು.
ಪೆಡ್ಡಪಲ್ಲಿ ಲೋಕಸಭಾ ಕ್ಷೇತ್ರದಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು ಮೂರು ಎಸ್ಸಿ ಮೀಸಲು ಕ್ಷೇತ್ರಗಳಿವೆ. 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಆರ್ಎಸ್ ಮತ್ತು 2ರಲ್ಲಿ ಕಾಂಗ್ರೆಸ್ ಗೆದ್ದಿತ್ತು.
ಜಿ ವಿವೇಕಾನಂದ ಅವರು ಕಾಂಗ್ರೆಸ್ಗೆ ಮತ್ತೆ ವಾಪಸ್ ಆಗುತ್ತಿರುವುದು ಪಕ್ಷಕ್ಕೆ ದೊಡ್ಡ ಲಾಭ ತಂದುಕೊಡಲಿದೆ ಎಂದು ಭಾವಿಸಲಾಗಿದೆ.
ADVERTISEMENT
ADVERTISEMENT