ADVERTISEMENT
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ವ್ಹೀಲ್ಚೇರ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.
ನವದೆಹಲಿಯಲ್ಲಿರುವ ಪ್ರಧಾನಮಂತ್ರಿಗಳ ಅಧಿಕೃತ ನಿವಾಸ 7, ಲೋಕಕಲ್ಯಾಣ ಮಾರ್ಗನಲ್ಲಿ ಭೇಟಿ ನಡೆದಿದೆ.
ಮೂರನೇ ಬಾರಿಗೆ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಮಂತ್ರಿಗಳ ನಿವಾಸದಲ್ಲಿ ಮೋದಿ ಮತ್ತು ದೇವೇಗೌಡರ ನಡುವೆ ನಡೆದ ಮೊದಲ ಭೇಟಿ ಇದಾಗಿದೆ.
ಭೇಟಿಯ ವೇಳೆ ದೇವೇಗೌಡರ ಕಿರಿಮಗ ಮತ್ತು ಮಂಡ್ಯ ಸಂಸದರೂ ಆಗಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ಕೂಡಾ ಇದ್ದರು.
ಭೇಟಿಯ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಲೋಕಸಭಾ ಚುನಾವಣೆ ಬಳಿಕ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆಯಲ್ಲಿ ಮೋದಿಯವರು ಧ್ಯಾನಕ್ಕೆ ಕೂತಿದ್ದ ಫೋಟೋದ ಕೈಬಹರದ ಚಿತ್ರವನ್ನು ಉಡುಗೊರೆಯಾಗಿ ನೀಡಿದರು.
ವಿವಿಧ ವಿಷಯಗಳ ಬಗ್ಗೆ ದೇವೇಗೌಡ ದೃಷ್ಟಿಕೋನವನ್ನು ಹೊಗಳಿದ ಪ್ರಧಾನಿ ಮೋದಿ ಉಡುಗೊರೆಯನ್ನು ನೋಡಿದ ಬಳಿಕ ಕನ್ಯಾಕುಮಾರಿಯಲ್ಲಿ ನಡೆಸಿದ ಧ್ಯಾನ ನೆನೆಪಾಯ್ತು ಎಂದು ಬರೆದುಕೊಂಡಿದ್ದಾರೆ.
ADVERTISEMENT