ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಷ ದೇಶ ತೊರೆದ ಬೆನ್ನಲ್ಲೇ, ಅವರ ಸಹೋದರರಾದ ಮಾಜಿ ಪ್ರಧಾನಿ ಮಹಿಂದ ರಾಜಪಕ್ಷ ಹಾಗೂ ಹಣಕಾಸು ಸಚಿವ ಬಸಿಲ್ ರಾಜಪಕ್ಷ ಅವrಉ ದೇಶ ತೊರೆಯದಂತೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ.
ಶ್ರೀಲಂಕಾ ತೊರೆದು ಹೋಗಿರುವ ಗೋಟಬಯಾ ರಾಜಪಕ್ಷ ಅವರು ಮೊದಲು ಮಾಲ್ಡೀವ್ಸ್ಗೆ ಹೋಗಿದ್ದರು. ನಂತರ ಅಲ್ಲಿಂದ ಸಿಂಗಾಪುರಕ್ಕೆ ಹೋಗಿದ್ದಾರೆ.
ಗೋಟಬಯ ರಾಜಪಕ್ಷ ಇ-ಮೇಲ್ ಮುಖಾಂತರ ಸ್ಪೀಕರ್ಗೆ ಅಧ್ಯಕ್ಷ ಸ್ಥಾನದ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಇನ್ನು, ಪ್ರಧಾನಿಯಾಗಿರುವ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಮಿ ಅಧಿಕಾರ ಸ್ವೀಕರಿಸಿದ್ದಾರೆ.