ಅಬಕಾರಿ ಹಗರಣ( Excise Scam )ದ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodiya) ಸೇರಿದಂತೆ 16 ಜನರ ಮೇಲೆ ಕೇಂದ್ರೀಯ ತನಿಖಾ ದಳ (CBI) ಪ್ರಕರಣ ದಾಖಲಿಸಿದೆ.
ಇಂದು ಶುಕ್ರವಾರ ಬೆಳಿಗ್ಗೆಯಷ್ಟೇ ದೆಹಲಿ ಉಪಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವ ಮನೀಶ್ ಸಿಸೋಡಿಯಾ(Manish Sisodiya) ಮನೆ ಸಿಬಿಐ ದಾಳಿ ಮಾಡಿತ್ತು.
ಇದೀಗ, ದೆಹಲಿಯಲ್ಲಿ ನಡೆದ ಅಬಕಾರಿ ಹಗರಣ( Excise Scam )ಕ್ಕೆ ಸಂಬಂಧಿಸಿದಂತೆ ದೆಹಲಿ ಆಪ್ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಮೊದಲ ಆರೋಪಿಯನ್ನಾಗಿಸಿ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ, ಅಬಕಾರಿ ಇಲಾಖೆ ಆಯುಕ್ತರಾಗಿದ್ದ ಅರ್ವ ಗೋಪಿ ಕೃಷ್ಣ, ಉಪ ಆಯುಕ್ತರಾದ ಆನಂದ್ ತಿವಾರಿ, ಸಹಾಯಕ ಕಮೀಷನರ್ ಪಂಕಜ್ ಭಟ್ನಾಗರ್ ಅವರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ಹಗರಣ( Excise Scam )ದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಬಕಾರಿ ಇಲಾಖೆಯ ಐಎಎಸ್ ಅಧಿಕಾರಿಗಳು ಸೇರಿದಂತೆ 11 ಜನ ಲಿಕ್ಕರ್ ವ್ಯವಹಾರದ ಮಾಲೀಕರ ಮೇಲೆಯೂ ಎಫ್ಐಆರ್ ದಾಖಲಾಗಿದೆ.