ಮಂಗಳೂರು ಮೂಲದ ವ್ಯಕ್ತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದರ ಸಂಬಂಧ ತನಿಖೆಗೆ ಸಹಕರಿಸದೇ ಹೋದರೆ ಭಾರತದಲ್ಲಿ ಫೇಸ್ಬುಕ್ನ ಚಟುವಟಿಕೆಯನ್ನೇ ನಿಲ್ಲಿಸುವಂತೆ ಆದೇಶ ಕೊಡಬೇಕಾದಿತು ಎಂದು ಕರ್ನಾಟಕ ಹೈಕೋರ್ಟ್ ಫೇಸ್ಬುಕ್ಗೆ ಎಚ್ಚರಿಕೆ ನೀಡಿದೆ.
ಫೇಸ್ಬುಕ್ ಪೋಸ್ಟ್ವೊಂದರ ಸಂಬಂಧ ಮಂಗಳೂರು ಮೂಲದ ಶೈಲೇಶ್ ಕುಮಾರ್ ಅವರು ಸೌದಿ ಜೈಲಿನಲ್ಲಿದ್ದಾರೆ. ಅದು ಶೈಲೇಂದ್ರ ಕುಮಾರ್ ಅವರ ಖಾತೆಯಲ್ಲ, ಅವರ ಹೆಸರಲ್ಲಿ ಯಾರೋ ಸೃಷ್ಟಿಸಿರುವ ನಕಲಿ ಖಾತೆ ಎನ್ನುವುದು ಶೈಲೆಂದ್ರ ಅವರ ಪತ್ನಿಯ ವಾದ.
ಶೈಲೇಂದ್ರ ಕುಮಾರ್ ಅವರಿಗೆ ನೀಡಲಾಗುತ್ತಿರುವ ನೆರವು ಮತ್ತು ಸೌದಿಯಲ್ಲಿ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಯುತ್ತಿದೆ ಎಂಬ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ADVERTISEMENT
ADVERTISEMENT