ಯಕ್ಷಗಾನದ ಖ್ಯಾತ ಭಾಗವತ, ಬಲಿಪ ಪರಂಪರೆಯ ಕೊಂಡಿ ಬಲಿಪ ಪ್ರಸಾದ್ ಭಾಗವತ (46) ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಎರಡನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಅವರು ಗಂಟಲು ಕ್ಯಾನ್ಸರ್ನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದ್ದರಿಂದ ಈ ವರ್ಷದ ಯಕ್ಷಗಾನ ಮಂಡಳಿಯಲ್ಲಿ ಭಾಗವಹಿಸರಲಿಲ್ಲ. ಮೂಡಬಿದಿರೆ ಮಾರೂರಿನ ನೂಯಿ ಎಂಬಲ್ಲಿ ಜನಿಸಿದ್ದ ಪ್ರಸಾದ್ ಬಲಿಪರಿಗೆ ಅವರ ತಂದೆ ಬಲಿಪ ನಾರಾಯಣ ಭಾಗವತರೇ ಗುರುವಾಗಿದ್ದರು.
17 ರ ಹರೆಯದಲ್ಲೇ ಕಟೀಲು ಮೇಳದಲ್ಲಿ ಭಾಗವತಿಕೆ ಆರಂಭಿಸಿ ಪ್ರಧಾನ ಭಾಗವತರಾಗಿ ಬೆಳೆದಿದ್ದರು.
ಮೂರು ದಶಕಗಳಿಂದ ಪ್ರಸಿದ್ದ ಬಲಿಪ ಶೈಲಿಯ ಭಾಗವತಿಕೆ ಸಾಂಪ್ರದಾಯಿಕ ಶೈಲಿಯನ್ನು ಮುಂದುವರೆಸಿ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಪೌರಾಣಿಕ ಪ್ರಸಂಗಗಳಲ್ಲಿ ಅಧ್ಬುತ ಹಿಡಿತ ಹೊಂದಿದ್ದ ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.