ಕೃಷ್ಣ ನದಿಯಾಗ ನೀರುನೂ ಪುಕ್ಕಟ್ಟೆ ಇದೆ, ಕರೆಂಟೂ ಪುಕ್ಕಟ್ಟೇ ಇದೆ. ಇನ್ನ ರೈತರಿಗೆ ಒಂದೇ ಆಸೆ ಇರೋದು, ಮ್ಯಾಗ ಮ್ಯಾಗ ಬರಗಾಲ ಬೀಳ್ಲಿ ಅಂತ, ಯಾಕಪ್ಪ ಅಂದ್ರೆ ಸಾಲ ಮನ್ನಾ ಆಗ್ತಾದೆ ಅಂತ. ಹಂಗ ಬಯಸಬಾರದು. ನೀವು ಬೇಡ ಅಂದ್ರನೂ ಮೂರ್ನಾಲ್ಕು ವರ್ಷಕ್ಕೊಂದು ಸರ್ತಿ (ಬರಗಾಲ) ಬಂದೇ ಬರುತ್ತದ
ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ದುರಂಹಕಾರದ ಮಾತುಗಳನ್ನಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಆಡಿರುವ ಮಾತು ಕಟು ಟೀಕೆಗೆ ಕಾರಣವಾಗಿದೆ.
ಇದೇ ಮೊದಲಲ್ಲ:
ಸಚಿವ ಶಿವಾನಂದ ಪಾಟೀಲ್ ಈ ರೀತಿ ಉಡಾಫೆ ಮಾತುಗಳನ್ನಾಡ್ತಿರುವುದು ಇದೇ ಮೊದಲಲ್ಲ.
ಪರಿಹಾರಕ್ಕಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಎಂದು ಸೆಪ್ಟೆಂಬರ್ನಲ್ಲಿ ನೀಡಿದ್ದ ಹೇಳಿಕೆಯೂ ಖಂಡನೆಗೆ ಗುರಿಯಾಗಿತ್ತು.
ವೀರೇಶ್ ಕಮಿಟಿ ಬರುವ ಮುನ್ನ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದ್ದವು. ಮೊದಲು 2 ಲಕ್ಷ ರೂ. ಪರಿಹಾರ ಕೊಡಲಾಗುತ್ತಿತ್ತು. ಪರಿಹಾರ ಹೆಚ್ಚಳವಾದ ನಂತರ ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಮಾಡಿಕೊಂಡ ಎಲ್ಲವನ್ನೂ ಪರಿಹಾರದ ಆಸೆಗಾಗಿ ರೈತ ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಲಾಗುತ್ತಿದೆ
ರೈತರ ಆತ್ಮಹತ್ಯೆ ಪ್ರಕರಣದ ಆತಂಕದ ರೀತಿಯಲ್ಲಿ ವರದಿ ಮಾಡಿದರೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತಿದೆ. ಒಬ್ಬರು ಕುಡಿದು ಸತ್ತಿರುತ್ತಾರೆ. ಹಾರ್ಟ್ ಅಟ್ಯಾಕ್ ಆಗಿ ಸತ್ತವರೂ ಇದ್ದಾರೆ. 2020ರಲ್ಲಿ 500ಕ್ಕೂ ಹೆಚ್ಚು ಆತ್ಮಹತ್ಯೆಗಳು ನಡೆದಿವೆ. 2021ರಲ್ಲಿ 600ಕ್ಕೂ ಹೆಚ್ಚು ಸೂಸೈಡ್ ಆಗಿವೆ. 2022 ರಿಂದ 2023ರ ತನಕ 412 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 64 ಜನ ರೈತರ ಆತ್ಮಹತ್ಯೆ ಆಗಿದೆ. ಆದರೆ ಈ ಕುರಿತು ಎಫ್ಐಆರ್ ಪರಿಗಣನೆಗೆ ತೆಗೆದುಕೊಂಡರೆ ಅದು ನಿಮ್ಮ ತಪ್ಪು. ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ
ಎಂದು ಸಚಿವ ಶಿವಾನಂದ್ ಪಾಟೀಲ್ ಹೇಳಿದ್ದರು.
ADVERTISEMENT
ADVERTISEMENT