ವಿವಾದಗಳನ್ನು ಬಗೆಹರಿಸಲು ಪಾಕಿಸ್ತಾನದ ಜೊತೆ ಮಾತುಕತೆಗಳನ್ನು ನಡೆಸದ್ದಕ್ಕಾಗಿ ನರೇಂದ್ರ ಮೋದಿ ಸರಕಾರವನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಶ್ರೀನಗರ ಸಂಸದ ಫಾರೂಖ್ ಅಬ್ದುಲ್ಲಾ ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಭಾರತ- ಪಾಕ್ ನಡುವಣ ವಿವಾದಗಳನ್ನು ಬಗೆಹರಿಸಲು ಮಾತುಕತೆ ನಡೆಸದಿದ್ದರೆ ಗಾಝಾದಲ್ಲಿನ ಸ್ಥಿತಿಯನ್ನೇ ನಾವು ಎದುರಿಸಬೇಕಾಗಬಹುದು ಅಂತ ನ್ಯಾಷನಲ್ ಕಾನ್ಫರೆನ್ಸ್ ನಾಯಕ, ಶ್ರೀನಗರ ಸಂಸದ ಫಾರೂಖ್ ಅಬ್ದುಲ್ಲಾ ನರೇಂದ್ರ ಮೋದಿಯವರ ಸರ್ಕಾರವ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ನಾವು ನಮ್ಮ ಸ್ನೇಹಿತರನ್ನು ಬದಲಿಸಬಹುದು, ಆದರೆ ನಮ್ಮ ನೆರೆಹೊರೆಯವರನ್ನಲ್ಲ ಎಂಬ ಮಾಜಿ ಪ್ರಧಾನಿ ವಾಜಪೇಯಿಯವರ ಹೇಳಿಕೆಯನ್ನ ಉಲ್ಲೇಖಿಸಿರುವ ಫಾರೂಖ್ ಅಬ್ದುಲ್ಲಾ, ಯುದ್ಧವು ಈಗ ಆಯ್ಕೆಯಲ್ಲ ಮತ್ತು ಮಾತುಕತೆ ಮೂಲಕವೇ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಅಂತ ಹೇಳಿದ್ದು ಪ್ರಧಾನಿ ನರೇಂದ್ರ ಮೋದಿಯವರೇ, ಆದರೆ ಮಾತುಕತೆ ಎಲ್ಲಿ ಆಗಿದೆ ? ನವಾಝ್ ಶರೀಫ್ ಪಾಕಿಸ್ತಾನದ ಪ್ರಧಾನಿಯಾಗುವುದರಲ್ಲಿದ್ದು ತಾವು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದಿದ್ದಾರೆ. ಆದರೆ ನಾವು ಈ ಮಾತುಕತೆಗೆ ಯಾಕೆ ಸಿದ್ಧರಿಲ್ಲ ಅಂತ ಪ್ರಶ್ನಿಸಿರುವ ಫಾರೂಖ್ ಅಬ್ದುಲ್ಲಾ, ಮಾತುಕತೆ ಮೂಲಕವೇ ಕೂಡಲೇ ಪರಿಹಾರ ಕಂಡುಕೊಳ್ಳದೆ ಹೋದಲ್ಲಿ ಇಸ್ರೇಲ್ ನಿಂದ ಬಾಂಬ್ ದಾಳಿಗೊಳಗಾಗಿ ತತ್ತರಿಸುತ್ತಿರುವ ಗಾಝಾ ಮತ್ತು ಪ್ಯಾಲೆಸ್ತೀನ್ ಸ್ಥಿತಿಯನ್ನೇ ನಾವು ಎದುರಿಸಲಿದ್ದೇವೆ ಎಂದಿದ್ದಾರೆ.
ಫಾರೂಖ್ ಅಬ್ದುಲ್ಲಾರ ಈ ಹೇಳಿಕೆ ಭಾರತದ ಸೇನಾ ಸಾಮರ್ಥ್ಯವನ್ನು ಟೀಕಿಸುವಂತಿದ್ದು, ದೇಶಾದ್ಯಂತ ನಾಯಕರು ಮತ್ತು ನಾಗರಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಇಂಡಿಯಾ ಮೈತ್ರಿಕೂಟಕ್ಕೂ ಫಾರೂಖ್ ಅಬ್ದುಲ್ಲಾರ ಈ ಹೇಳಿಕೆ ತೀವ್ರ ಮುಜುಗರವುಂಟು ಮಾಡಿದೆ.