ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದಲೂ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳವಾಗಲಿದೆ.
ಖಾಸಗಿ ಕಾಲೇಜುಗಳಲ್ಲಿ ಶೇಕಡಾ 10ರಷ್ಟು ಶುಲ್ಕ ಹೆಚ್ಚಳಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರವೇ ಅನುಮತಿ ನೀಡಿದೆ.
ಕರ್ನಾಟಕ ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘದೊಂದಿಗೆ 2022ರ ಜೂನ್ನಲ್ಲಿ ಆಗಿನ ಬಿಜೆಪಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.
ಈ ಒಪ್ಪಂದದ ಪ್ರಕಾರ ರಾಜ್ಯ ಸರ್ಕಾರ ಎರಡು ಶೈಕ್ಷಣಿಕ ವರ್ಷಗಳಲ್ಲೂ ಪ್ರತಿ ವರ್ಷ ಶೇಕಡಾ 10ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಲಾಗಿತ್ತು.
ಈ ಶುಲ್ಕ ಹೆಚ್ಚಳದಿಂದ ಸಿಇಟಿ ಕೋಟಾದಲ್ಲಿ ಪಡೆಯಲಾಗುವ ಸೀಟಿನ ಮೊತ್ತ 71,896 ರೂಪಾಯಿಗಳಿಂದ 79,085 ರೂಪಾಯಿಗಳಿಗೆ ಹೆಚ್ಚಳವಾಲಿದೆ.
ಕಾಮೆಡ್ ಕೆ ಕೋಟಾದ ಸೀಟುಗಳಿಗೆ ಶುಲ್ಕ 1,58,118 ರೂಪಾಯಿಗಳಿಂದ 1,73,929 ರೂಪಾಯಿಗಳಿಗೆ ಹೆಚ್ಚಳವಾಗಲಿದೆ.
ADVERTISEMENT
ADVERTISEMENT