ಪೂನಂ ಪಾಂಡೆ ತನ್ನ ಸುಳ್ಳು ಸಾವಿನ ಸುದ್ದಿಯನ್ನು ಹರಡಿದ್ದು, ನಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಮುಂಬೈ ಪೊಲೀಸರಿಗೆ ಪತ್ರ ಬರೆದಿದೆ. ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡ ಪತ್ರದ ಪ್ರಕಾರ, ಪೂನಂ ಪಾಂಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಇನ್ನೊಂದಡೆ ಇಎಐಸಿಡಬ್ಲ್ಯೂಎ ಅಧ್ಯಕ್ಷ ಸುರೇಶ್ ಗುಪ್ತಾ ಅವರು ನಟಿಯ ವಿರುದ್ಧ ದೂರು ದಾಖಲು ಮಾಡಿದ್ದು, ವಕೀಲ ಆಲಿ ಕಾಶಿಫ್ ಖಾನ್ ದೇಶ್ಮುಖ್ ಅವರು ಕೂಡಾ ನಟಿ ಮತ್ತು ಅವರ ಪಿಆರ್ ತಂಡದ ವಿರುದ್ಧ ಹೌಟರ್ಫೈ ಏಜೆನ್ಸಿಯೊಂದಿಗೆ ದೂರು ದಾಖಲು ಮಾಡಿದ್ದಾರೆ.
ಪಾಂಡೆ ಮತ್ತು ಅವರ ಮ್ಯಾನೇಜರ್ ಇಬ್ಬರ ವಿರುದ್ಧ ತಮ್ಮ PR ಪ್ರಚಾರಕ್ಕಾಗಿ ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ದಯವಿಟ್ಟು ಎಫ್ಐಆರ್ ದಾಖಲಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ