ಹೊಳಲ್ಕೆರೆ ಪಟ್ಟಣದಲ್ಲಿ ಮೃತ ವ್ಯಕ್ತಿಗೆ ಸೇರಿದ ಆಸ್ತಿ ಲಪಟಾಯಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಚಂದ್ರಕಲಾ, ಪುತ್ರರಾದ ರಘುಚಂದನ್, ದೀಪ್ ಚಂದನ್ ವಿರುದ್ದ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಶ್ರೀಧರ್ ಎಂಬುವವರ ಬಳಿ ನಾಗರಾಜ್ ಎನ್ನುವವರು ಜಿಪಿಎ ಪಡೆದಿದ್ದರು. ಶ್ರೀಧರ್ ಮೃತರಾದ ಬಳಿಕ GPA ದುರುಪಯೋಗಪಡಿಸಿಕೊಂಡ ನಾಗರಾಜ್ ಮತ್ತು ಶಾಸಕರ ಕುಟುಂಬಸ್ಥರು ಆಸ್ತಿ ಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಮೃತ ಶ್ರೀಧರ್ ಸಹೋದರಿ ಲತಾ ಮತ್ತಿತರರು ಕೋರ್ಟ್ ಮೊರೆ ಹೋಗಿದ್ದರು. ಆರೋಪಿ ನಾಗರಾಜ್, ಶಾಸಕ ಚಂದ್ರಪ್ಪ ಪತ್ನಿ ಚಂದ್ರಕಲಾ, ಪುತ್ರ ರಘು ಚಂದನ್, ದೀಪ್ ಚಂದನ್ ಹಾಗೂ ಸಬ್ ರಿಜಿಸ್ಟರ್ ನಾಗರತ್ನ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ FIR ದಾಖಲಿಸುವಂತೆ ಏಪ್ರಿಲ್ 30ರಂದು ಕೋರ್ಟ್ ಸೂಚನೆ ನೀಡಿತ್ತು.