ಉಡುಪಿ ಜಿಲ್ಲೆಯ ಬ್ರಹ್ಮಾವರದ ಉಪ್ಪೂರು ಹತ್ತಿರದ ತಿಂಕಬೆಟ್ಟು ಗ್ರಾಮದಲ್ಲಿ 5 ವರ್ಷದ ಬಾಲಕ ನೀರಿನ ಕೊಳಕ್ಕೆ ಬಿದ್ದು ಸಾವನ್ನಪ್ಪಿರುವ ಅಘಾತಕಾರಿ ಘಟನೆ ಗುರುವಾರ ನಡೆದಿದೆ.
ಉಪ್ಪೂರು ನಿವಾಸಿಗಳಾದ ನಾರ್ಮನ್ ಮತ್ತು ಸಿಲ್ವಿಯಾ ಲೂಯಿಸ್ ಅವರ ಪುತ್ರ ಲಾರೆನ್ ಲೂಯಿಸ್ (5) ಮೃತ ದುರ್ದೈವಿ ಬಾಲಕ.
ಮನೆಯ ಹೊರಗಡೆ ಆಟವಾಡುತ್ತಿರುವಾಗ ಬಾಲಕ ಲಾರೆನ್ ನೀರಿನ ಕೊಳಕ್ಕೆ ಬಿದ್ದಿದ್ದಾನೆ.
ಕುವೈತ್ನಲ್ಲಿ ವಾಸವಿದ್ದ ನಾರ್ಮನ್ ಮತ್ತು ಸಿಲ್ವಿಯಾ ಲೂಯಿಸ್ ದಂಪತಿಗಳು ಕೆಲ ದಿನಗಳ ಹಿಂದೆಯಷ್ಟೇ ಸ್ವಗ್ರಾಮವಾದ ಉಪ್ಪೂರಿಗೆ ಬಂದಿದ್ದರು.