ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಪ್ರವಾಹ ಮತ್ತು ಭೂಕುಸಿತಕ್ಕೆ 11 ಮಂದಿ ಸಾವನ್ನಪ್ಪಿದ್ದಾರೆ.
ಅರುಣಾಲಚ ಪ್ರದೇಶ ರಾಜಧಾನಿ ಇಟಾ ನಗರದಲ್ಲಿ ಭೂಕುಸಿತಕ್ಕೆ ಐವರು ಸಾವನ್ನಪ್ಪಿದ್ದು, ಹಲವರು ಸಿಲುಕಿಕೊಂಡಿದ್ದಾರೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆ ಆಗಿದೆ. ಇಲ್ಲಿವರೆಗೆ ಅವೇಶಷಗಳಡಿ ಸಿಲುಕಿದ್ದ 6 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಭೂಕುಸಿತ ಉರುಳಿದ ರೈಲು ಬೋಗಿಗಳು:
ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಇಬ್ಬರು ಮತ್ತು ಲಖೀಂಪುರ್ ಜಿಲ್ಲೆಯಲ್ಲಿ ಭೂಕುಸಿತಕ್ಕೆ ಒಬ್ಬರು ಬಲಿ ಆಗಿದ್ದಾರೆ. ದಿಮಾ ಹಸಾವೋ ಜಿಲ್ಲೆಯಲ್ಲಿ ಭೂಕುಸಿತಕ್ಕೆ ಮೂವರು ಸಾವನ್ನಪ್ಪಿದ್ದಾರೆ. ದಿಮಾ ಹಸಾವೋ ರೈಲು ನಿಲ್ದಾಣದಲ್ಲಿ ಭೂಕುಸಿತಕ್ಕೆ ನಿಂತಿದ್ದ ರೈಲುಗಳ ಬೋಗಿಗಳು ಉರುಳಿಬಿದ್ದಿವೆ.
Video from New Haflong railway station in Dima Hasao earlier this morning. (Credit: NF railways) @IndianExpress pic.twitter.com/izuH8rZHJ6
— Tora Agarwala (@ToraAgarwala) May 16, 2022
Nearly 2 Lakh In 20 Assam Districts Affected By Floods pic.twitter.com/PCyS6StA4l
— Abhinav_bebaak (@abhinavBebaak) May 17, 2022
72 ಗಂಟೆಗಳಿAದ ಸುರಿಯುತ್ತಿರುವ ಪ್ರವಾಹ ಮಳೆಯಿಂದ 2 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. 811 ಹಳ್ಳಿಗಳು ಮುಳುಗಡೆ ಆಗಿವೆ. 6 ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿ ಆಗಿದೆ.
ಮೇಘಾಲಯ ಮತ್ತು ಅಸ್ಸಾಂನಲ್ಲಿ ಪ್ರವಾಹ ಮಳೆಗೆ ಉಕ್ಕಿನ ಸೇತುವೆಗಳೂ ಕೊಚ್ಚಿಕೊಂಡು ಹೋಗಿವೆ.
ಪ್ರವಾಹ ಮಳೆ ಮತ್ತು ಭೂಕುಸಿತದಿಂದ ರಸ್ತೆ ಮತ್ತು ರೈಲು ಸಂಪರ್ಕ ಕಡಿತಗೊಂಡಿದೆ.