ಕಳೆದ ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅರ್ಧ ಬೆಂಗಳೂರೇ ಸಾಗರವಾಗಿ ಮಾರ್ಪಟ್ಟಿದೆ. ಈ ಮಳೆಯಿಂದಾಗಿ ಐಟಿ,ಬಿಟಿ ಸೇರಿದಂತೆ ವಲಸೆ ಕಾರ್ಮಿಕರು, ಸಾಮಾನ್ಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಮನೆಗಳಿಗೆ ನೀರು ನುಗ್ಗಿದ್ದರೆ, ಅಪಾರ್ಟ್ಮೆಂಟ್ ಸಮುಚ್ಚಯಗಳು ಈಜುಕೊಳಗಳಾಗಿ ಮಾರ್ಪಟ್ಟಿವೆ.
ಹೀಗೆ, ಬೆಂಗಳೂರಿನಲ್ಲಿ ಸೃಷ್ಠಿಯಾದ ಸಮಸ್ಯೆಯ ಬಗ್ಗೆ ಚರ್ಚಿಸಲು ಕರೆಯಲಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಪ್ರವಾಹ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಹಾಗೂ ಬೆಂಗಳೂರಿನ ಪದ್ಮನಾಭ ನಗರದ ಶಾಸಕ ಆರ್.ಅಶೋಕ್ (Minister R Ashok) ನಿದ್ದೆಯಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ : ಬೆಂಗಳೂರು ಮಳೆಯಲ್ಲಿ ನಟಿ ರಮ್ಯಾರ ರಾಜಕೀಯ ಪ್ರಶ್ನೆಗಳು
ಈ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಮುಳುಗುವುದರಲ್ಲಿ ಹಲವು ವಿಧಗಳಿವೆ! ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ, ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ!
ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಚಿವ ಆರ್.ಅಶೋಕ್ (Minister R Ashok) ಅವರ ಭರ್ಜರಿ ನಿದ್ದೆ. ‘ಹಲಾಲ್ ಕಟ್’ ಎಂದರೆ ಥಟ್ನೆ ಎಚ್ಚರಾಗುತ್ತಾರೆ! ‘ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ’ ಎಂಬ ಮಾತು ಸಚಿವರಿಗೇ ಹೇಳಿದ್ದೇನೋ! ಎಂದು ಕಾಂಗ್ರೆಸ್ ಐಟಿ ಘಟಕ ವ್ಯಂಗ್ಯವಾಡಿದೆ.
ಇದನ್ನೂ ಓದಿ : Rain Alert: ಇಂದಿನಿಂದ ಸೆಪ್ಟೆಂಬರ್ 9ರವರೆಗೆ ಯಾವ-ಯಾವ ಜಿಲ್ಲೆಗಳಲ್ಲಿ ಭಾರೀ ಮಳೆ..? – ಇಲ್ಲಿದೆ ಮಾಹಿತಿ