ADVERTISEMENT
ದೇಶದ ಆರ್ಥಿಕತೆ ಸುಭದ್ರವಾಗಿದೆ. ವಿಶ್ವದ ಟಾಪ್ ೫ ದೇಶಗಳ ಪಟ್ಟಿಯಲ್ಲಿ ಭಾರತ ಒಂದು.. ಮೋದಿ ಸರ್ಕಾರದ ನೀತಿಗಳು ಅತ್ಯುತ್ತಮವಾಗಿವೆ.. ವಿರೋಧಪಕ್ಷಗಳ ಟೀಕೆಗಳೆಲ್ಲಾ ಸುಳ್ಳು.. ದೇಶ ವಿರೋಧಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಂದಲ್ಲಿ ಹೋದಲ್ಲಿ ಹೇಳಿಕೆಗಳನ್ನು ನೀಡುತ್ತಾರೆ.
ಆದರೆ, ವಿತ್ತ ಸಚಿವೆಯ ಈ ಮಾತುಗಳನ್ನು ಒಪ್ಪಲು ಖುದ್ದು ನಿರ್ಮಲಾ ಸೀತಾರಾಮನ್ ಅವರ ಪತಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಅವರೇ ಒಪ್ಪಲು ಸಿದ್ಧರಿಲ್ಲ.
ಸದ್ಯ ಭಾರತ ದೇಶ ದೊಡ್ಡ ಮಟ್ಟದ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಸ್ವಾತಂತ್ರ್ಯ ಬಂದ ನಂತರ ನಿರುದ್ಯೋಗ, ದರ ಹೆಚ್ಚಳ ಈಗಲೇ ಅತ್ಯಧಿಕವಾಗಿ ಇರುವುದು ಎಂದು ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕ ಪರಕಾಲ ಪ್ರಭಾಕರ್ ಹೇಳಿದ್ದಾರೆ.
ಹೈದರಾಬಾದ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪರಕಾಲ ಪ್ರಭಾಕರ್, ದೇಶದ ಆರ್ಥಿಕ ವ್ಯವಸ್ಥೆ ಕುಸಿದುಬಿದ್ದಿದೆ. ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಎಷ್ಟು? ಈ ದೇಶದಲ್ಲಿ ಸಾವನ್ನಪ್ಪಿದ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟು ..? ಈ ಬಗ್ಗೆ ಮೋದಿ ಸರ್ಕಾರದ ಬಳಿ ಲೆಕ್ಕ ಇದೆಯಾ ಎಂದು ಪರಕಾಲ ಪ್ರಭಾಕರ್ ಕಟುವಾಗಿ ಪ್ರಶ್ನೆ ಮಾಡಿದ್ದಾರೆ.
ನಮ್ಮ ದೇಶದ ಶೇಕಡಾ 25ರಷ್ಟು ಮಂದಿ ಪೌಷ್ಟಿಕ ಆಹಾರ ಸಿಗದೇ ಬಳಲುತ್ತಿದ್ದಾರೆ. ಭಾರತದೊಳಗೆ ಚೀನಾ ನುಗ್ಗಿದರೂ, ಗಂಗೆಯಲ್ಲಿ ಶವಗಳು ತೇಲಿದರೂ, ಆರ್ಥಿಕ ವ್ಯವಸ್ಥೆ ಸಂಪೂರ್ಣ ನಾಶವಾದರೂ, ನಿರುದ್ಯೋಗ ತಾಂಡವ ಆಡುತ್ತಿದ್ದರೂ…
ಈ ಯಾವ ವಿಚಾರಗಳ ಬಗ್ಗೆಯೂ ಮಾತನಾಡದೇ ಧರ್ಮದ ಮುಸುಕಿನಲ್ಲಿ ಎಲ್ಲವನ್ನು ಮರೆಮಾಡುತ್ತಿದ್ದಾರೆ. ದೇಶವನ್ನು ಛಿದ್ರ ಮಾಡುವ ರೀತಿಯಲ್ಲಿ ಪ್ರಚೋದಿಸಲಾಗುತ್ತಿದೆ. ದೇಶದ ಧರ್ಮದ ಅಮಲಿನಲ್ಲಿ ತೇಲುತ್ತಿದೆ.
ಭಾರತವನ್ನು ಇನ್ನೊಂದು ಪಾಕಿಸ್ತಾನವನ್ನಾಗಿ ಮಾಡಬೇಕು ಎಂದಿದ್ದರೇ ಗಾಂಧಿ, ನೆಹರೂ, ಪಟೇಲ್ಗೆ ಎರಡು ನಿಮಿಷವೂ ಬೇಕಾಗಿರಲಿಲ್ಲ. ಆದರೆ, ಅವರು ಹಾಗೇ ಮಾಡಲಿಲ್ಲ..
ಎಂದು ಪರಕಾಲ ಪ್ರಭಾಕರ್ ಹೇಳಿದ್ದಾರೆ.
ADVERTISEMENT