ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ದಿವಂಗತ ನಂದಮೂರಿ ತಾರಕ್ ರಾಮಾರಾವ್(NTR) ರ ನಾಲ್ಕನೇ ಪುತ್ರಿ ಉಮಾ ಮಹೇಶ್ವರಿ ಇಂದು ಆತ್ಮಹತ್ಯೆ್ಗೆ ಶರಣಾಗಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಖಿನ್ನತೆಗೊಳಲಾಗಿದ್ದ ಕಾಂತಮನೇನಿ ಉಮಾಮಹೇಶ್ವರಿ ಅವರು ತಮ್ಮ ಬೆಡ್ರೂಮ್ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
52 ವರ್ಷದ ಉಮಾಮಹೇಶ್ವರಿಯವರು ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಘಿ ತೀ ವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.
ಜೂಬಿಲಿ ಹಿಲ್ಸ್ನ ತಮ್ಮ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ, ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಉಮಾಮಹೇಶ್ವರಿ ಸಾವಿನ ಬೆನ್ನಲ್ಲೇ ಇಡೀ ಎನ್ಟಿಆರ್ ಕುಟುಂಬ ದುಃಖ ತಪ್ತರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ನಟ ಬಾಲಕೃಷ್ಣ, ಜ್ಯೂ.ಎನ್ಟಿಆರ್, ಚಂದ್ರಬಾಬು ಅವರು ಉಮಾ ಮಹೇಶ್ವರಿ ನಿವಾಸಕ್ಕೆ ಆಗಮಿಸಿದ್ದಾರೆ.