ಕೋಲಾರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟದ ವಿಡಿಯೋವನ್ನು ಪತ್ರಕರ್ತರು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಸಂಯುಕ್ತ ಕರ್ನಾಟಕ ವರದಿಗಾರ ಸ್ಕಂದಕುಮಾರ್ ಮತ್ತು ಕನ್ನಡಪ್ರಭ ವರದಿಗಾರ ಅಮರೇಶ್ ಮೇಲೆ ರಮೇಶ್ ಕುಮಾರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ರಮೇಶ್ ಕುಮಾರ್ ವರ್ತನೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಾಂಗ್ರೆಸ್ ಕಚೇರಿ ಎದುರು ಮೌನ ಪ್ರತಿಭಟನೆಗೆ ನಿರ್ಧರಿಸಿದೆ. ರಮೇಶ್ ಕುಮಾರ್ ಪರವಾಗಿ ಎಮ್.ಎಲ್.ಸಿ ಅನಿಲ್ ಕುಮಾರ್ ಮತ್ತು ಶಾಸಕ ನಂಜೇಗೌಡ ಅವರ ಕ್ಷಮೆಯಾಚಿಸಿದ್ದಾರೆ.