ಉತ್ತರ ಪ್ರದೇಶ ಬುಲಂದ್ಶಹರ್ ಜಿಲ್ಲೆಯ ಹಿಂದೂ ದೇಗುಲದಲ್ಲಿ ಮೂರ್ತಿಗಳನ್ನು ಹಾಳುಗೆಡವಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸರು ಬರಾಲ್ ಗ್ರಾಮದ ಹರೀಶ್ ಶರ್ಮಾ, ಶಿವಂ, ಕೇಶವ ಮತ್ತು ಅಜಯ್ ಎಂಬ ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಬಂಧಿತರು ದೇವಸ್ಥಾನದ ಆವರಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
4 ದೇವಸ್ಥಾನಗಳಲ್ಲಿ ಹನುಮಂತ, ಶಿವ ಸೇರಿದಂತೆ 12 ವಿವಿಧ ದೇವರುಗಳ ಮೂರ್ತಿಗಳನ್ನು ಕಿಡಿಕೇಡಿಗಳು ಹಾಳುಗೆಡವಿದ್ದರು.
ಪ್ರಕರಣದ ತನಿಖೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿದ್ದರು.
ಮುಖ್ಯ ಆರೋಪಿ ಹರೀಶ್ ಇದೇ ಗ್ರಾಮದವನು.
ADVERTISEMENT
ADVERTISEMENT