ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಸತತ ಮೂರನೇ ದಿನವೂ ಬದಲಾವಣೆ ಆಗಿಲ್ಲ. ಏಪ್ರಿಲ್ 06ರಂದು ಇದ್ದ ಬೆಳೆಗಳನ್ನೇ ಮುಂದುವರೆಸಲಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 111.09 ರುಪಾಯಿ ಇದೆ. ಡೀಸೆಲ್ ಬೆಲೆ 94.79 ರುಪಾಯಿ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 100 ಡಾಲರ್ ಒಳಗೆ ಇಳಿದಿದೆ. ಅಲ್ಲದೇ, ಅಮೇರಿಕಾದ ತನ್ನ ಸಂಗ್ರಹದಲ್ಲಿದ್ದ ಒಂದಿಷ್ಟು ತೈಲವನ್ನು ಬಿಡುಗಡೆ ಮಾಡಿದೆ. ಹೀಗಾಗಿ ಬ್ರೇನ್ಟ್ ಬೇಡಿಕೆ ಕುಸಿದು, ದರ ಕೂಡಾ ಇಳಿದಿದೆ.