ಇದೇ ಸೆಪ್ಟಂಬರ್ 8 ರಂದು ಇಂಗ್ಲೆಂಡನ್ನು ಸುದೀರ್ಘ 70 ವರ್ಷಗಳ ಕಾಲ ಆಳಿದ್ದ ಎಲೆಜಬೆತ್ 2 ಸಾವನ್ನಪ್ಪಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಭಾಗವಹಿಸಲಿದ್ದಾರೆ.
ಬ್ರಿಟನ್ನ ಲಂಡನ್ನಲ್ಲಿ ಇದೇ ಸೆಪ್ಟಂಬರ್ 17 ರಿಂದ 19 ರ ವರೆಗೆ ಎಲೆಜಬೆತ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ಸಮಯದಲ್ಲಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಸೆಪ್ಟಂಬರ್ 8 ರಂದು ರಾಣಿ ಎಲೆಜಬೆತ್ ಸಾವನ್ನಪ್ಪಿದ್ದ ನಂತರ ಭಾರತ ಸರ್ಕಾರ ಅವರ ಅಂತ್ಯಕ್ರಿಯೆಗೆ ಸಂತಾಪ ಸೂಚಿಸಿತ್ತು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu), ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರೂ ಸಹಿತ ಎಲೆಜಬೆತ್ ನಿಧನಕ್ಕೆ ಸಂತಾಪ ಸೂಚಿಸಿದ್ದರು.
ಸೆಪ್ಟಂಬರ್ 11 ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ಆಚರಣೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿತ್ತು. ಇದನ್ನೂ ಓದಿ : Big Breaking : ಬಾರದ ಲೋಕಕ್ಕೆ ಇಂಗ್ಲೆಂಡ್ ರಾಣಿ