ಉಡುಪಿ ಜಿಲ್ಲೆಯಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 22 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಬ್ದುಲ್ ಮುನೀರ್, ಸಲ್ಮಾನ್, ಬಸವರಾಜ್, ವಿಷ್ಣು ಕೆ ವಿ, ದಿನೇಶ್, ಕೆ ವಿನಾಯಕ ಸಂದೀಪ, ಕೃಷ್ಣ, ಸುಧಾಕರ, ನಾಗರಾಜ, ಸುಬ್ರಹ್ಮಣ್ಯ, ಶ್ರೀಧರ ಇ ಆ್ಯಂಟನಿ, ಶ್ರೀತಿರಾಜ್, ರಘು, ಹುಸೈನ್, ಸಂದೇಶ್, ರಾಜು ಮೊಗೇರ, ಗೋಪಾಲ, ಗಣೇಶ, ಮಿಥುನ್, ಸುಧರ್ಮ, ಕಮಲಾಕ್ಷ ಮತ್ತು ಸುಧಾಕರ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಕೋಟಾ ಠಾಣೆ ಪಿಎಸ್ಐ ಶಂಭುಲಿಂಗಯ್ಯ ಅವರ ನೇತೃತ್ವದಲ್ಲಿ ಪೊಲೀಸರ ತಂಡ ಕುಂದಾಪುರ ತಾಲೂಕಿನ ಗುಡ್ಡೆಯಂಗಡಿ ಕ್ರಾಸ್ನಲ್ಲಿರುವ ವಿನಾಯಕ ಹಾಲ್ನಲ್ಲಿ ಜೂಜು ಆಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿತು.
24 ಮಂದಿಯನ್ನು ಬಂಧಿಸಿ 1 ಲಕ್ಷದ 49 ಸಾವಿರದ 680 ರೂಪಾಯಿ ಮೊತ್ತದ ನಗದು, 3 ಸ್ಟೀಲ್ ಟೇಬಲ್, 24 ಪ್ಲಾಸ್ಟಿಕ್ ಕುರ್ಚಿಗಳು, ಮೂರು ಕಾರು, 2 ಸ್ಕೂಟರ್ಸ್ನ್ನು ವಶಪಡಿಸಿಕೊಂಡಿದ್ದಾರೆ.
ADVERTISEMENT
ADVERTISEMENT