ಬೆಂಗಳೂರಿನಲ್ಲಿ ಗಣೇಶ ಹಬ್ಬದ (Ganesha Festival) ಸಂಭ್ರಮಕ್ಕೆ ಇಂದು ಭಾನುವಾರ ಬಹುತೇಕ ಕೊನೆಯ ದಿನ. ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಾಗಿ ಇಂದಿಗೆ 5 ನೇ ದಿನಾವಗಿದೆ. ಬೆಂಗಳೂರಿನ ಬಹುತೇಕ ಗಣೇಶ ಮಂಡಳಿಗಳು ಇಂದು ಗನೇಶ ಮೂರ್ತಿಯ ವಿಸರ್ಜನೆಗೆ ತಯಾರಿ ನಡೆಸಿವೆ.
ಇಂದು ಬೆಂಗಳೂರಿನಲ್ಲಿ ಅತಿ ಹೆಚ್ಚು ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ. ಸಾಮೂಹಿಕ ಗಣೇಶ ವಿಸರ್ಜನೆ (Ganesha Festival) ಹಿನ್ನೆಲೆ ಒಂದಷ್ಟು ರೋಡ್ಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಪ್ರಯಾಣಕ್ಕೆ ಬದಲಿ ರಸ್ತೆಗಳ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ನಾಗವಾರ ಜಂಕ್ಷನ್ ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಭಾಗಶಃ ಸಂಚಾರ ನಿರ್ಬಂಧ ಮಾಡಲಾಗಿದೆ. ಜೊತೆಗೆ ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೆಲವೆಡೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿರ್ಬಂಧ ಮಾಡಲಾಗಿದೆ.
ಇದನ್ನೂ ಓದಿ : ಹೋರಾಟಕ್ಕೆ ಮಣಿದ ಬಿಬಿಎಂಪಿ: 10 ದಿನಗಳ ಗಣೇಶೋತ್ಸವಕ್ಕೆ ಅನುಮತಿ
ನಾಗವಾರದಿಂದ ಹೊರ ಹೋಗುವ ದಾರಿ :
-ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನಾಗವಾರ ಜಂಕ್ಷನ್ನಿಂದ ಸಂಚಾರ
-ಹೆಣ್ಣೂರು ಜಂಕ್ಷನ್-ಸಿದ್ದಪ್ಪ ರೆಡ್ಡಿ ಜಂಕ್ಷನ್-ಅಯೋಧ್ಯ ಜಂಕ್ಷನ್ ಲಿಂಗರಾಜಪುರಂ
-ಐಟಿಸಿ ಫೈ ಓವರ್ ಮೂಲಕ ರಾಬರ್ಟ್ನ್ ರಸ್ತೆ ಜಂಕ್ಷನ್ನಲ್ಲಿ ಬಲ ತಿರುವು ಪಡೆದುಕೊಂಡು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪುವುದು.
ನಾಗವಾರ ಕಡೆ ಬರುವ ದಾರಿ :
-ಶಿವಾಜಿನಗರದ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆ
-ಕೋಲ್ಸ್ ರಸ್ತೆ, ವೀಲರ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಲು ಅವಕಾಶ
-ಆರ್.ಟಿ.ನಗರ ದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರಣ್ಣಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ಕಡೆಗೆ ಸಂಚರಿಸಬಹುದು.
ಇದನ್ನೂ ಓದಿ : Big Breaking : ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
ವಾಹನ ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು
-ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್ ನಿಂದ ಗೋವಿಂದಪುರ ಪೊಲೀಸ್ ಠಾಣೆಯವರೆಗೆ
-ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್ ನಿಂದ ನರೇಂದ್ರ ಟೆಂಟ್, ಜಂಕ್ಷನ್ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪೊಲೀಸರಿಂದ ಮುಂಜಾಗ್ರತೆ :
ಇಂದು ಬೆಂಗಳೂರಿನ ಹಲವಡೆ ಗಣೇಶ ವಿಸರ್ಜನೆ ಹಿನ್ನೆಲೆ ಪೂರ್ವ ವಿಭಾಗದ ಪೊಲೀಸರು ಶನಿವಾರ ಪಥಸಂಚಲನ ನಡೆಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ನಾಳೆ ಗಣೇಶ ಮೆರವಣಿಗೆಯಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಮೆರವಣಿಗೆ ಬರುವ ರಸ್ತೆಗಳಲ್ಲಿ ಸಿಸಿಟಿವಿ, ಡ್ರೋಣ್ ಮೂಲಕ ನಿಗಾ ಇಡಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಹಿನ್ನಲೆ ಅತಿಸೂಕ್ಷ್ಮ ಪ್ರದೇಶದಲ್ಲಿನ ಬಾರ್ & ರೆಸ್ಟೋರೆಂಟ್, ಪಬ್ ಗಳಿಗೆ ನಿಷೇಧ ಹೇರಲಾಗಿದೆ. ಕೊತ್ತನೂರು, ರಾಮಮೂರ್ತಿನಗರ, ಅಮೃತಹಳ್ಳಿ, ಸಂಪಿಗೆಹಳ್ಳಿ ಕೆಜೆಹಳ್ಳಿ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಇದನ್ನೂ ಓದಿ : Big Breaking : ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್