ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಹೊಣೆಗಾರಿಕೆಯ ಸಮಾಜಕಲ್ಯಾಣ ಇಲಾಖೆಯ ಜಾರಿಗೊಳಿಸುವ ಗಂಗಾ ಕಲ್ಯಾಣ ಯೋಜನೆಯಲ್ಲಿ 431 ಕೋಟಿ ರೂಪಾಯಿ ಅಕ್ರಮ ಆಗಿದೆ ಎಂಬ ಬಗ್ಗೆ ಕಾಂಗ್ರೆಸ್ ಮಾಜಿ ಸಚಿವ ಮತ್ತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಇದರ ಪ್ರಧಾನ ಇಂಜಿನಿಯರ್ ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿ ಆಗಿರುವ ಪ್ರಭಾಕರ ಡಿ ಹಮಿಗಿ ಅವರು ಸಲ್ಲಿಸಿರುವ ತನಿಖಾ ವರದಿಯನ್ನು ಪ್ರಿಯಾಂಕ್ ಖರ್ಗೆ ಬಹಿರಂಗೊಳಿಸಿದ್ದಾರೆ.
1. ಮೌಲ್ಯಮಾಪನ ಪ್ರಕ್ರಿಯೆ ಸಮಯದಲ್ಲಿ ಟರ್ನ್ ಓವರ್ ದಾಖಲಾತಿಗಳ ದೃಢೀಕರಣವನ್ನು ಸಂಬAಧಪಟ್ಟವರಿAದ ಪಡೆದಿರುವುದಿಲ್ಲ. ದೂರು ಬಂದ ನಂತರ ದೃಢೀಕರಣಕ್ಕಾಗಿ ಪತ್ರ ಬರೆದಿರುತ್ತಾರೆ. ಯುಡಿಐನ್(ವಿಶಿಷ್ಟ ದಾಖಲಾತಿ ಗುರುತು ಸಂಖ್ಯೆ)ಯಲ್ಲಿ ಪರಿಶೀಲಿಸಿದಾಗ ಕೆಲವು ಗುತ್ತಿಗೆದಾರರ ಕೆಲವು ಆರ್ಥಿಕ ವಿವರಗಳ ದಾಖಲೆಗಳು ಹೋಲಿಕೆ ಆಗುವುದಿಲ್ಲ.
2. ಬೇರೆ ಬೇರೆ ಕರಾರಿನಲ್ಲಿ ನಿರ್ವಹಿಸಲಾದ ಕಾಮಗಾರಿಗಳನ್ನು ಏಕ ಕಾಮಗಾರಿ ಎಂದು ಒಗ್ಗೂಡಿಸಿ ನಿಯಮವನ್ನು ಉಲ್ಲಂಘಿಸಲಾಗಿದೆ.
4. ಪರಿಮಾಣಗಳ ಪ್ರಮಾಣಕ್ಕಾಗಿ ಕೂಡಾ ಅನೇಕ ವರ್ಷದ ಕಾಮಗಾರಿಗಳ ಪರಿಮಾಣಗಳನ್ನು ಒಗ್ಗೂಡಿಸಿ ನಿಯಮ ಉಲ್ಲಂಘಿಸಲಾಗಿದೆ.
ಎAದು ನೀಡಿರುವ ವರದಿಯನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊAಡಿದ್ದಾರೆ.
`ಗAಗಾ ಕಲ್ಯಾಣ ಯೋಜನೆಯ 431 ಕೋಟಿ ರೂಪಾಯಿ ಅಕ್ರಮದ ಬಗ್ಗೆ ನಾನು ಹೇಳಿದಾಗ ಅಕ್ರಮ ನಡೆದೇ ಇಲ್ಲ ಎಂದು ಸಮರ್ಥಿಸಿದ್ದ ಮಾನ್ಯ ಕೋಟಾ ಶ್ರೀನಿವಾಸಪೂಜಾರಿ ಅವರೇ ಕೆಟಿಟಿಪಿ ನಿಯಮ ಉಲ್ಲಂಘನೆ ಆಗಿದೆ ಎಂದು ಸರ್ಕಾರದ ತನಿಖಾ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ದಲಿತ, ಹಿಂದುಳಿದ ಹಣದ ಲೂಟಿ ಸ್ಪಷ್ಟವಾಗಿದೆ. ನೀವು ರಾಜೀನಾಮೆ ಕೊಡಲು ಮುಹೂರ್ತ ಬೇಕೇ..?
ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.