ಪಬ್ಗೆ ಪಾರ್ಟಿಗೆ ಹೋಗಿದ್ದ ವೇಳೆ ಪರಿಚಯ ಆಗಿದ್ದ ಅಪ್ರಾಪ್ತೆಯ ಮೇಲೆ ವಿದ್ಯಾರ್ಥಿಗಳು ಮರ್ಸಿಡೀಜ್ ಬೆಂಜ್ ಕಾರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಹೈದ್ರಾಬಾದ್ನಲ್ಲಿ ನಡೆದಿದೆ.
ಆ ಅಪ್ರಾಪ್ತ ಬಾಲಕಿ ಹೈದ್ರಾಬಾದ್ನ ಪ್ರತಿಷ್ಠಿತ ಕುಟುಂಬದಾಕೆ ಎಂದು ವರದಿ ಆಗಿದೆ. ಕೃತ್ಯ ಎಸಗಿದ ಬಾಲಕರೂ ಕೂಡಾ ಪ್ರಭಾವಿ ರಾಜಕೀಯ ಕುಟುಂಬದವರು ಎಂಬ ಮಾಹಿತಿ ಇದೆ. ಕೃತ್ಯ ಎಸಗಿದವರಲ್ಲಿ ಒಬ್ಬ ಶಾಸಕರ ಮಗ ಕೂಡಾ ಸೇರಿದ್ದಾನೆ ಎನ್ನಲಾಗಿದೆಯಾದರೂ ಪೊಲೀಸರು ಅಲ್ಲಗಳೆದಿದ್ದಾರೆ.
ಕೃತ್ಯ ಎಸಗಿದ ಬಾಲಕರು 11 ಮತ್ತು 12ನೇ ತರಗತಿಯವರು.
17 ವರ್ಷದ ಆ ಅಪ್ರಾಪ್ತ ಬಾಲಕಿ ತನ್ನ ಗೆಳಯನೊಂದಿಗೆ ಪಬ್ಗೆ ಪಾರ್ಟಿಗೆ ಹೋಗಿದ್ದಳು. ಪಾರ್ಟಿ ಮುಗಿಯುವ ಮೊದಲೇ ಆಕೆಯ ಗೆಳೆಯ ಹೊರಟು ಹೋಗಿದ್ದ. ಈ ವೇಳೆ ಆಕೆ ಪಾರ್ಟಿಯಲ್ಲೇ ಒಬ್ಬ ಬಾಲಕನನ್ನು ಪರಿಚಯ ಮಾಡಿಕೊಂಡಿದ್ದ. ಆತ ತಾನು ನಿನ್ನನ್ನು ಮನೆಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು ಎಂದು ಮಾಹಿತಿ ಇದೆ.