ಈ ಹಿಂದೆ ಕಾಲವೇ ಮೋಸಗಾರ ಸಿನಿಮಾಗೆ ಬಂಡವಾಳ ಹೂಡಿದ್ದ ಸುನಿಲ್ ವದತ್ ಈಗ ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. ‘ಗ್ಯಾಂಗ್ಸ್ ಆಫ್ ಪಿನಾಕಿ’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಪ್ರಸನ್ನ ಆಂಜನೇಯ ಸ್ವಾಮಿ ದೇಗುಲದಲ್ಲಿ ಸರಳವಾಗಿ ಜರುಗಿದೆ.
ಕಾಮಿಡಿ ಥ್ರಿಲ್ಲರ್ ‘ಗ್ಯಾಂಗ್ಸ್ ಆಫ್ ಪಿನಾಕಿ’
‘ಗ್ಯಾಂಗ್ಸ್ ಆಫ್ ಪಿನಾಕಿ’ ಕಾಮಿಡಿ ಥ್ರಿಲ್ಲರ್ ಕಥಾಹೂರಣದ ಸಿನಿಮಾ. ಈ ಚಿತ್ರಲ್ಲಿ ತಮಿಳ್ ವೆಬ್ ಸೀರಿಯಸ್ ನಲ್ಲಿ ಮಿಂಚಿರುವ ಯುವ ಪ್ರತಿಭೆ ವಿವೇಕ್ ಚಕ್ರವರ್ತಿ ನಾಯಕನಾಗಿ ಬಣ್ಣ ಹಚ್ಚಿದ್ದು, ದೆಹಲಿ ಮೂಲದ ಬೆಡಗಿ ಕೃತಿಕಾ ಯಾದವ್ ನಾಯಕಿಯಾಗಿ ನಟಿಸಲಿದ್ದು, ಇದು ಇವರಿಬ್ಬರ ಮೊದಲ ಕನ್ನಡ ಸಿನಿಮಾ. ಉಳಿದಂತೆ ವಿಜಯ್ ರಾಮ್, ಕೃಷ್ಣಮೂರ್ತಿ, ವೆಂಕಟೇಶ್ ಮೂರ್ತಿ, ನಾಗಿ ಶೆಟ್ಟಿ, ಮಧುಸೂಧನ್, ಪುನೀತ್ ಗೌಡ ತಾರಾಬಳಗದಲ್ಲಿದ್ದಾರೆ.
ಭಾವಸ್ಪಂದನ ಪ್ರೊಡಕ್ಷನ್ಸ್ ಪ್ರೊಡಕ್ಷನ್ ನಡಿ ನಿರ್ದೇಶಕ ಸುನಿಲ್ ವದತ್ ‘ಗ್ಯಾಂಗ್ಸ್ ಆಫ್ ಪಿನಾಕಿ’ ಸಿನಿಮಾಗೆ ಹಣ ಹಾಕುತ್ತಿದ್ದು, ರುದ್ರೇಶ್ ಕ್ಯಾಮೆರಾ ಕೈಚಳಕ, ಹಕ್ಕಿ ಸಂಕಲನ, ಅನೂಪ್ ಟಿ ಸಹ ನಿರ್ದೇಶನ ಹಾಗೂ ಸುಹಾಸ್ ರಾಜ್ ಹೆಚ್ ಅಸೋಸಿಯೆಟ್ ಡೈರೆಕ್ಟರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೇ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದ್ದು, ಗೋವಾ, ಚಿಕ್ಕಮಗಳೂರು, ಬೆಂಗಳೂರು, ಥೈಲ್ಯಾಂಡ್ ನಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.
https://youtu.be/h7I0nH5ZadI