ಸಚಿವ ಸಂಪುಟ ಸರ್ಜರಿಗೂ ಮುಂಚೆ ಆಡಳಿತದ ಸರ್ಜರಿಗೆ ಸರ್ಕಾರ ಕೈಹಾಕಿದೆ. ಬಿಬಿಎಂಪಿ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ವರ್ಗಾವಣೆ ಮಾಡಿ ಇಂದು ಗುರುವಾರ ಸರ್ಕಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ಆಯುಕ್ತರಾಗಿ ಗೌರವ್ ಗುಪ್ತಾ ಕೊರೋನಾ ನಿಯಂತ್ರಣಕ್ಕಾಗಿ ಉತ್ತಮ ಕೆಲಸ ಮಾಡಿದ್ದರು. ಇದೀಗ ಈ ಸ್ಥಾನಕ್ಕೆ ಕಂದಾಯ ಇಲಾಖೆಯ ಪ್ರಿನ್ಸಿಪಲ್ ಕಾರ್ಯದರ್ಶಿಯಾಗಿದ್ದ ಐಎಸ್ ಅಧಿಕಾರಿ ತುಷಾರ್ ಗಿರಿ ನಾಥ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆಡಳಿತದ ಸರ್ಜರಿಗೆ ಕೈಹಾಕಿರುವ ಸರ್ಕಾರ ಗೌರವ್ ಗುಪ್ತಾ ಅವರ ಜೊತೆ 17 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.