ಭಾರತೀಯ ಉದ್ಯಮಿ ಗೌತಮ್ ಅದಾನಿ (Gautam Adani) ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಏಷ್ಯಾದ ವ್ಯಕ್ತಿಯೊಬ್ಬರು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನ ಮೊದಲ ಮೂರು ಸ್ಥಾನಗಳಿಗೆ ಪ್ರವೇಶಿಸಿದ್ದು ಇದೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಚೀನಾದ ಜಾಕ್ ಮಾ ಅವರಿಗೂ ಇದು ಈವರೆಗೆ ಸಾಧ್ಯವಾಗಿಲ್ಲ. $137.4 ಬಿಲಿಯನ್ ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ (Gautam Adani) ಅವರು ಫ್ರಾನ್ಸ್ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಜಗತ್ತಿನ ಮೂರನೇ ಅtiದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ಅವರು ಶ್ರೇಯಾಂಕದಲ್ಲಿ ಅಮೆರಿಕದ ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರ ನಂತರದ ಸ್ಥಾನದಲ್ಲಿದ್ದಾರೆ.
ಗೌತಮ್ ಅದಾನಿ ಅವರು ಕಳೆದ ಕೆಲವು ವರ್ಷಗಳಿಂದ ಕಲ್ಲಿದ್ದಲು-ಬಂದರುಗಳ ಸಮೂಹವನ್ನು ವಿಸ್ತರಿಸುತ್ತಿದ್ದಾರೆ, ಡೇಟಾ ಕೇಂದ್ರಗಳಿಂದ ಹಿಡಿದು ಸಿಮೆಂಟ್, ಮಾಧ್ಯಮ ಮತ್ತು ಅಲ್ಯೂಮಿನಾಗಳವರೆಗೆ ಎಲ್ಲದರಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅದಾನಿ ಸಮೂಹ ಈಗ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು ಮತ್ತು ವಿಮಾನ ನಿಲ್ದಾಣ ನಿರ್ವಾಹಕರು, ನಗರ-ಅನಿಲ ವಿತರಕರು ಮತ್ತು ಕಲ್ಲಿದ್ದಲು ಗಣಿಗಾರರಾಗಿದ್ದಾರೆ.
ಇದನ್ನೂ ಓದಿ : BIG BREAKING: NDTV ಖರೀದಿಸಿದ ಗೌತಮ್ ಅದಾನಿ
ಗೌತಮ್ ಅದಾನಿ 2022 ರಲ್ಲಿ ತನ್ನ ಸಂಪತ್ತಿಗೆ $60.9 ಬಿಲಿಯನ್ ಸೇರಿಸಿದ್ದಾರೆ. ಇದು ಎಲ್ಲರಿಗಿಂತ ಐದು ಪಟ್ಟು ಹೆಚ್ಚು. ಅವರು ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಅವರನ್ನು ಮೊದಲ ಬಾರಿಗೆ ಶ್ರೀಮಂತ ಏಷ್ಯನ್ ಸ್ಥಾನದಲ್ಲಿ ಹಿಂದಿಕ್ಕಿದರು. ಕಳೆದ ತಿಂಗಳು ಮೈಕ್ರೋಸಾಫ್ಟ್ ಕಾರ್ಪ್ನ ಬಿಲ್ ಗೇಟ್ಸ್ರನ್ನು ಮೀರಿಸಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಈಗ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯ ಸ್ಥಾನಕ್ಕೆ ಏರಿದ್ದಾರೆ.
ಅದಾನಿಯವರ ವ್ಯಾಪಾರಗಳಲ್ಲಿ ಪ್ರಮುಖವಾಗಿ ಸಾಲದಿಂದಲೇ ಹಣವನ್ನು ಪಡೆಯಲಾಗಿದೆ ಎಂದು ಕ್ರೆಡಿಟ್ಸೈಟ್ಸ್ ಈ ತಿಂಗಳ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಸಾಲದ ಸುಳಿ: ಅದಾನಿ ಬುಟ್ಟಿಯಲ್ಲಿ NDTV ಬಿದ್ದಿದ್ದು ಹೇಗೆ..? – NDTV ಪತನದ ಕಥೆ