ದೇಶದ ಪ್ರಮುಖ ಟೆಕ್ಸ್ಟೈಲ್ ಕಂಪನಿ ಗೋಕಲ್ದಾಸ್ ಇಮೇಜಸ್ನ (Gokaldas Images) ಮಾಲೀಕರಾದ ಜಗದೀಶ್ ನರೈನ್ದಾಸ್ ಹಿಂದೂಜಾ (Jagadish Naraindas Hinduja) ಇನ್ನಿಲ್ಲ.
77 ವರ್ಷದ ಅವರು ಶುಕ್ರವಾರ ನಿಧನರಾಗಿದ್ದಾರೆ. ಇವರು ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಇವರು ಪತ್ನಿ ಪುಷ್ಪಾ ಹಿಂದೂಜಾ ಮತ್ತು ಇಬ್ಬರು ಪುತ್ರರಾದ ಸುಮಿರ್ ಮತ್ತು ಮುನಿಶ್ ಹಿಂದೂಜಾ ಅವರನ್ನು ಅಗಲಿದ್ದಾರೆ.
ಟೆಕ್ಸ್ಟೈಲ್ ಉದ್ಯಮದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಜಗದೀಶ್ ಹಿಂದೂಜಾ ಅವರು ತಮ್ಮ ಕಂಪನಿಯ ನೌಕರರ ಬಗ್ಗೆ ವಹಿಸುತ್ತಿದ್ದ ಕಾಳಜಿಯಿಂದಲೂ ಗೌರವಕ್ಕೆ ಪಾತ್ರರಾಗಿದ್ದರು.