ಸೊಲ್ಲಾಪುರ ಮತ್ತು ಮೈಸೂರು ನಡುವಿನ ‘ಗೋಲಗುಂಬಜ್ ಎಕ್ಸ್ಪ್ರೆಸ್’ ಹಾಗೂ ಕಾರವಾರ ಮತ್ತು ಬೆಂಗಳೂರು ನಡುವಿನ ‘ಪಂಚಗಂಗಾ ಎಕ್ಸ್ಪ್ರೆಸ್’ ರೈಲುಗಳ ಸಮಯ ಬದಲಾವಣೆ ಮಾಡಿ ರೈಲ್ವೆ ಇಲಾಖೆ ಆದೇಸ ಹೊರಡಿಸಿದೆ.
ವಿಜಯಪುರ, ಬೆಂಗಳೂರು ಮಾರ್ಗವಾಗಿ ಸೊಲ್ಲಾಪುರದಿಂದ ಮೈಸೂರಿಗೆ ಹೊರಡುವ ‘ಗೋಲಗುಂಬಜ್ ಎಕ್ಸ್ಪ್ರೆಸ್’ ರೈಲಿನ ಸಮಯ ಬದಲಾವಣೆ ಮಾಡಲಾಗಿದೆ. ಗೋಲಗುಂಬಜ್ ಎಕ್ಸ್ಪ್ರೆಸ್ ಟ್ರೈನ್ ನಂಬರ್ 16536 ಆಗಿದ್ದು, ಈ ಟ್ರೈನ್ ಸೊಲ್ಲಾಪುರದಲ್ಲಿ ಪ್ರತಿದಿನ ಮಧ್ಯಾಹ್ನ 2 ಗಂಟೆ 10 ನಿಮಿಷಕ್ಕೆ ಬಿಡಲಿದೆ. ಬೆಳಿಗ್ಗೆ 10:45 ಕ್ಕೆ ಮೈಸೂರು ತಲುಪಲಿದೆ. ಈ ಟ್ರೈನ್ ವಿಜಯಪುರಕ್ಕೆ ಸಾಯಂಕಾಲ 4:56 ಕ್ಕೆ ಬರಲಿದೆ.
Timings revision for 16536 Solapur – Mysuru #Golgumbaz express from 1st July 2022 between #Vijayapura and #Bengaluru
Src: IRCTC pic.twitter.com/JOFbsVx4fz
— Karnataka Rail Users (@KARailway) June 28, 2022
ಸಕಲೇಶಪುರ ಮಾರ್ಗದಲ್ಲಿ ಕಾರವಾರದಿಂದ ಬೆಂಗಳೂರಿಗೆ ಹೊರಡುವ ಪಂಚಗಂಗಾ ಎಕ್ಸ್ಪ್ರೆಸ್ ರೈಲಿನ ಸಮಯವನ್ನೂ ಬದಲಾವಣೆ ಮಾಡಲಾಗಿದೆ. ಪಂಚಗಂಗಾ ಎಕ್ಸ್ಪ್ರೆಸ್ ರೈಲಿನ ಸಂಖ್ಯೆ : 16596 ಆಗಿದ್ದು, ಈ ರೈಲು ಪ್ರತಿದಿನ ಕಾರವಾರದಲ್ಲಿ ಸಾಯಂಕಾಲ 6 ಗಂಟೆಗೆ ಬಿಡಲಿದೆ. ಬೆಳಿಗ್ಗೆ 7.15 ಕ್ಕೆ ಬೆಂಗಳೂರನ್ನು ತಲುಪಲಿದೆ.